ಪೃಥ್ವಿ ಚೌಹಾಣ್ ಮತ್ತು ಮನೋಜ್ ಕಲ್ರಾ ಜೋಡಿಯ ಜೊತೆಯಾಟ 
ಕ್ರಿಕೆಟ್

ಅಂಡರ್ 19 ಕ್ರಿಕೆಟ್ ವಿಶ್ವಕಪ್: ಪ್ರಬಲ ಆಸ್ಟ್ರೇಲಿಯಾಗೆ 329 ರನ್ ಗಳ ಗುರಿ ನೀಡಿದ ಭಾರತ

ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ಕ್ರಿಕೆಟ್ ವಿಶ್ವಕಪ್ ನ ತನ್ನ ಚೊಚ್ಚಲ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಬಲ ಆಸ್ಟ್ರೇಲಿಯಾ ತಂಡದ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ.

ಬೇ ಓವಲ್: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ಕ್ರಿಕೆಟ್ ವಿಶ್ವಕಪ್ ನ ತನ್ನ ಚೊಚ್ಚಲ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಬಲ ಆಸ್ಟ್ರೇಲಿಯಾ ತಂಡದ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ಪೃಥ್ವಿ ಚೌಹಾಣ್ ಬ್ಯಾಟಿಂಗ್ ಆರಿಸಿಕೊಂಡರು. ನಿರೀಕ್ಷೆಯಂತೆಯೇ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಚೌಹಾಣ್ ಮತ್ತು ಮನೋಜ್ ಕಲ್ರಾ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದರು. ಬರೊಬ್ಬರಿ  180 ರನ್ ಗಳ ದಾಖಲೆ ಜೊತೆಯಾಟವಾಡಿದ ಈ ಜೋಡಿಯನ್ನು ವಿಲ್ ಸದರ್ ಲೆಂಡ್ ಬೇರ್ಪಡಿಸಿದರು. 100 ಎಸೆತಗಳಲ್ಲಿ 94 ರನ್ ಸಿಡಿಸಿದ್ದ ಪೃಥ್ವಿ ಶಾ ಶತಕದ ಅಂಚಿನಲ್ಲಿ ಎಡವಿ ಪೆವಿಲಿಯನ್ ಸೇರಿಕೊಂಡರು. ನಾಯಕನಿಗೆ  ಉತ್ತಮ ಸಾಥ್ ನೀಡಿದ್ದ ಕಲ್ರಾ ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೇ 86 ರನ್ ಗಳಿಸಿ ಪರಮ್ ಉಪ್ಪಾಲ್ ಬೌಲಿಂಗ್ ನಲ್ಲಿ ಔಟ್ ಆದರು.
ಬಳಿಕ ಶಬ್ ಮನ್ ಗಿಲ್ ಭಾರತದ ರನ್ ಗಳಿಕೆಯನ್ನು 250ರ ಗಡಿದಾಟಿಸಿದರು. ಏಕಾಂಗ ಹೋರಾಟ ಪ್ರದರ್ಶನ ನೀಡಿದ ಗಿಲ್ ಕೇವಲ 54 ಎಸೆತಗಳಲ್ಲಿ 63 ರನ್ ಸಿಡಿಸಿದರು. ಕಲ್ರಾ ಔಟ್ ಆದ ಬಳಿಕ ಬಂದ ಹಿಮಾಂಶು ರಾಣಾ 14  ರನ್ ಗಳಿಸಿ ಔಟ್ ಆದರು. ಇವರ ಬೆನ್ನಲ್ಲೇ ಗಿಲ್ ಕೂಡ 63 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಕ್ರೀಸ್ ಗೆ ಬಂದ ಯಾವೊಬ್ಬ ಬ್ಯಾಟ್ಸಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ಆದರೂ ಪೃಥ್ವಿ ಚೌಹಾಣ್,  ಕಲ್ರಾ ಮತ್ತು ಗಿಲ್ ಹಾಕಿಕೊಟ್ಟ ಬೃಹತ್ ರನ್ ಗಳ ನೆರವನಿಂದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿತು.
ಆಸಿಸ್ ಪರ ಜಾಕ್ ಎಡ್ವರ್ಡ್ಸ್ 4 ವಿಕೆಟ್ ಪಡೆದರೆ, ಉಪ್ಪಲ್, ಆಸ್ಟಿನ್ ವಾ ಮತ್ತು ಸದರ್ಲೆಂಡ್ ತಲಾ 1 ವಿಕೆಟ್ ಪಡೆದರು.
ಪ್ರಸ್ತುತ ಭಾರತ ನೀಡಿರುವ 329 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಆಸ್ಟ್ರೇಲಿಯಾ 26.2 ಓವರ್ ನಲ್ಲಿ 112 ರನ್ ಗಳಿಸಿದ್ದು, 2 ವಿಕೆಟ್ ಕಳೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!