ಸೆಂಚೂರಿಯನ್: ನಿರ್ಲಕ್ಷ್ಯಕ್ಕೊಳಗಾದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಬಸ್ ಚಾಲಕನಿಗೆ ಟೀಂ ಇಂಡಿಯಾ ಆಟಗಾರರು ನೆರವಾದ ಘಟನೆ ನಡೆದಿದೆ.
ಟೀಂ ಇಂಡಿಯಾದ ಆಟಗಾರರ ಈ ಕೆಲಸ ಬಗ್ಗೆ ಬಸ್ ಚಾಲಕ ಆಂಡ್ರೆ ಕ್ರಾಗ್ ಸಂತಸ ವ್ಯಕ್ತಪಡಿಸಿದ್ದು ಭಾರತೀಯ ಆಟಗಾರರ ಹೃದಯ ಶ್ರೀಮಂತಿಕೆಯನ್ನು ಕೊಂಡಾಡಿದ್ದಾನೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರನ್ನು ಹೋಟೆಲ್ ನಿಂದ ಕ್ರೀಡಾಂಗಣಕ್ಕೆ ಕ್ರೀಡಾಂಗಣದಿಂದ ಹೋಟೆಲ್ ಗೆ ಕರೆದೊಯ್ಯುವ ಕೆಲಸವನ್ನು ಆಂಡ್ರೆ ಕ್ರಾಗ್ ನಿರ್ವಹಿಸುತ್ತಿದ್ದಾರೆ.
ಆಂಡ್ರೆ ಕ್ರಾಗ್ ಆಫ್ರಿಕಾದವರಾದರೂ ಇವರಿಗೆ ತಮ್ಮ ತಂಡ ಗೆಲ್ಲುವುದು ಎಳ್ಳಷ್ಟೂ ಇಷ್ಟವಿರಲಿಲ್ಲವಂತೆ. ಟೀಂ ಇಂಡಿಯಾ ಗೆಲ್ಲಲಿ ಎಂದಷ್ಟೇ ಬಯಸುತ್ತಿದ್ದರು. ಇದಕ್ಕೆ ಕಾರಣ ಭಾರತೀಯ ಕ್ರಿಕೆಟಿಗರು ತೋರಿದ ಪ್ರೀತಿ, ಔದಾರ್ಯ.
ಸಾಮಾನ್ಯ ಬಸ್ ಚಾಲಕನನ್ನು ಭಾರತ ಕ್ರಿಕೆಟಿಗರು ಆತ್ಮೀಯತೆಯಿಂದ ಕಂಡಿದ್ದಾರೆ. ತಮ್ಮ ತಂಡದ ಚಾಲಕ ರೋನಿ ಮೊಡ್ಲಿ ಜತೆಗೆ ಆಂಡ್ರೆ ಕ್ರಾಗ್ ಗೂ ಕುಡಿಯಲು ನೀರು, ಕಾಫಿ ವ್ಯವಸ್ಥೆ ಮಾಡಿದ್ದಾರಂತೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos