ರಾಹುಲ್ ದ್ರಾವಿಡ್ 
ಕ್ರಿಕೆಟ್

ಐಸಿಸಿ ಹಾಲ್ ಆಫ್ ಫೇಮ್ ಗೆ "ದಿ ವಾಲ್" ಆಫ್ ಕ್ರಿಕೆಟ್ ದ್ರಾವಿಡ್ ಸೇರ್ಪಡೆ

ಶ್ರೇಷ್ಠ ಕ್ರಿಕೆಟಿಗರ ಸಾಧನೆಯನ್ನು ಗುರುತಿಸುವ ಐಸಿಸಿ ಹಾಲ್ ಆಫ್ ಫೇಮ್ ಗೆ ಇಂಡಿಯನ್ ಕ್ರಿಕೆಟ್ ನ ದಿ ವಾಲ್ ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಲಾಗಿದೆ.

ವೆಲ್ಲಿಂಗ್ಟನ್: ಶ್ರೇಷ್ಠ ಕ್ರಿಕೆಟಿಗರ ಸಾಧನೆಯನ್ನು ಗುರುತಿಸುವ ಐಸಿಸಿ ಹಾಲ್ ಆಫ್ ಫೇಮ್ ಗೆ ಇಂಡಿಯನ್ ಕ್ರಿಕೆಟ್ ನ ದಿ ವಾಲ್ ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಲಾಗಿದೆ. 
ರಾಹುಲ್ ದ್ರಾವಿಡ್ ಅವರೊಂದಿಗೆ ಆಸ್ಟ್ರೇಲಿಯಾ ಆಟಗಾರರಾದ ಪಾಂಟಿಂಗ್, ಇಂಗ್ಲೆಂಡ್ ನ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್  ಕ್ಲೇರ್ ಟೇಲರ್ ಅವರನ್ನೂ ಸೇರ್ಪಡೆಗೊಳಿಸಲಾಗಿದೆ. ಭಾರತದಿಂದ ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಳ್ಳುತ್ತಿರುವ 5 ನೇ ಆಟಗಾರ ರಾಹುಲ್ ದ್ರಾವಿಡ್ ಆಗಿದ್ದು, 2009 ರಲ್ಲಿ ಬಿಶನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್, 2015 ರಲ್ಲಿ ಅನಿಲ್ ಕುಂಬ್ಳೆ ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಂಡಿದ್ದರು.  
ಈ ಖ್ಯಾತಿಗೆ ಪಾತ್ರರಾಗುತ್ತಿರುವ ಭಾರತದ 5 ನೇ ಕ್ರಿಕೆಟಿಗ ದ್ರಾವಿಡ್ ಆಗಿದ್ದರೆ, ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದ 25 ನೇ ಕ್ರಿಕೆಟಿಗರಾಗಿದ್ದು, ಕ್ಲೇರ್ ಟೇಲರ್ ಇಂಗ್ಲೆಂಡ್ ನ 7 ನೇ ಆಟಗಾರರಾಗಿದ್ದು ಮಹಿಳಾ ವಿಭಾಗದ ಮೂರನೇ ಆಟಗಾರರಾಗಿದ್ದಾರೆ. 
ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಗುರುತಿಸಲ್ಪಡುವ ಐಸಿಸಿ ಹಾಲ್ ಆಫ್ ಫೇಮ್ ನಲ್ಲಿ ಸೇರ್ಪಡೆಗೊಳ್ಳುವುದು ಕ್ರಿಕೆಟ್ ವೃತ್ತಿ ಜೀವನ  ಪ್ರಾರಂಭಿಸಿದಾಗಿನ ಕನಸಾಗಿರುತ್ತದೆ, ನನ್ನ ಕ್ರಿಕೆಟ್ ಜೀವನದ ಪ್ರತಿ ಕ್ಷಣವನ್ನೂ ನಾನು ಪ್ರೀತಿಸಿದ್ದೇನೆ ತಂಡ ಹಾಗೂ ನನ್ನ ವೈಯಕ್ತಿಕ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ದ್ರಾವಿಡ್ ಸಂತಸ ಹಂಚಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!