ಶ್ರೀಶಾಂತ್, ಹರ್ಭಜನ್ ಸಿಂಗ್ 
ಕ್ರಿಕೆಟ್

ಶ್ರೀಶಾಂತ್ ಬಾಡಿ ಬಿಲ್ಡ್ ಮಾಡಿರುವುದಕ್ಕೆ ಟ್ವೀಟರಿಗರು ಹರ್ಭಜನ್ ಕಾಲೆಳೆಯಲು ಏನು ಕಾರಣ?

ಟೀಂ ಇಂಡಿಯಾದ ಮಾಜಿ ವೇಗಿ ಹಾಗೂ ನಿಷೇಧಿತ ಕ್ರಿಕೆಟಿಗ ಎಸ್ ಶ್ರೀಶಾಂತ್ ಸದ್ಯ ದೇಹವನ್ನು ಹುರಿಗೊಳಿಸಿ ಬಾಹುಬಲಿಯಂತೆ ಕಾಣುತ್ತಿದ್ದು ಅವರ ಸದ್ಯದ...

ಬೆಂಗಳೂರು: ಟೀಂ ಇಂಡಿಯಾದ ಮಾಜಿ ವೇಗಿ ಹಾಗೂ ನಿಷೇಧಿತ ಕ್ರಿಕೆಟಿಗ ಎಸ್ ಶ್ರೀಶಾಂತ್ ಸದ್ಯ ದೇಹವನ್ನು ಹುರಿಗೊಳಿಸಿ ಬಾಹುಬಲಿಯಂತೆ ಕಾಣುತ್ತಿದ್ದು ಅವರ ಸದ್ಯದ ಫೋಟೋವನ್ನು ಪೋಸ್ಟ್ ಮಾಡಿದ್ದು ಇದಕ್ಕೆ ಟ್ವೀಟರಿಗರು ಹಿರಿಯ ಬೌಲರ್ ಹರ್ಭಜನ್ ಸಿಂಗ್ ಅವರ ಕಾಳೆಯುತ್ತಿದ್ದಾರೆ. 
ಹಿಂದೊಮ್ಮೆ ಅನುಭವಿ ಆಟಗಾರ ಹರ್ಭಜನ್ ಸಿಂಗ್ ಐಪಿಎಲ್ ಪಂದ್ಯಾವಳಿಯ ವೇಳೆ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದರು. ಆದರೆ ಈಗ ಹರ್ಭಜನ್ ಸಿಂಗ್ ಗೆ ಶ್ರೀಶಾಂತ್ ರನ್ನು ಮುಟ್ಟುವ ಧೈರ್ಯ ಬಾರದು ಎಂದು ಟ್ವೀಟರಿಗರು ಭಜ್ಜಿಯ ಕಾಳೆಯುತ್ತಿದ್ದಾರೆ. 
ಸದ್ಯಕ್ಕೆ ಶ್ರೀಶಾಂತ್ ಸಿನಿಮಾ ಮತ್ತು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ 34 ವರ್ಷದ ಶ್ರೀಶಾಂತ್ ತಮ್ಮ ದೇಹವನ್ನು ಹುರಿಗೊಳಿಸಿ ಹಲ್ಕ್ ರೀತಿಯಲ್ಲಿ ತಯಾರಾಗಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಅನೇಕರು ಹರ್ಭಜನ್ ಗೆ ಟಾಂಗ್ ನೀಡಿದ್ದಾರೆ. 
ಈಗ ಶ್ರೀಶಾಂತ್ ರನ್ನು ನೋಡಿ ಹರ್ಭಜನ್ ಸಿಂಗ್ ಇನ್ನೆಂದಿಗೂ ಶ್ರೀ ಜತೆ ಕ್ರಿಕೆಟ್ ಆಡಲು ಬರುವ ಯೋಚನೆಯೇ ಮಾಡುವುದಿಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ. ಈಗ ಶ್ರೀಶಾಂತ್ ಕೈಗೆ ಹರ್ಭಜನ್ ಸಿಂಗ್ ಸಿಗಬೇಕಿತ್ತು, ಶ್ರೀಶಾಂತ್ ನೋಡಲು ಹಳೆ ಹಿಂದಿ ಸಿನಿಮಾ ಸೂರ್ಯವಂಶಿಯ ಸಲ್ಮಾನ್ ಖಾನ್ ರಂತೆ ಕಾಣಿಸುತ್ತಿದ್ದಾರೆ. 
ಕೆಂಪೇಗೌಡ 2 ಕನ್ನಡ ಚಿತ್ರಕ್ಕಾಗಿ ಶ್ರೀಶಾಂತ್ ಈ ರೀತಿ ಜಿಮ್ ವರ್ಕ್ ಔಟ್ ಮಾಡುತ್ತಿದ್ದು ಸದ್ಯದಲ್ಲೇ ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಸಿದ್ಧತೆಯಲ್ಲೂ ಇದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!