ಕ್ರಿಕೆಟ್

ಟಿ20 ಕೂಡ ಮೂಲೆಗುಂಪು..!, 12 ಆಟಗಾರರು, 100 ಎಸೆತಗಳ ಮಾದರಿಯ ಕ್ರಿಕೆಟ್ ಆಯೋಜನೆಗೆ ಪ್ಲಾನ್!

Srinivasamurthy VN
ಲಂಡನ್: ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ ಅನ್ನು ಮೂಲೆಗುಂಪು ಮಾಡಿದ್ದ ಟಿ20 ಕ್ರಿಕೆಟ್ ಗೂ ಸೆಡ್ಡು ಹೊಡೆಯಬಲ್ಲ ಕ್ರಿಕಟ್ ಮಾದರಿಯನ್ನು ಪರಿಚಯಿಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ.
ಈ  ಹೊಸ ಮಾದರಿಯ ಕ್ರಿಕೆಟ್ ನಲ್ಲಿ ಪ್ರತೀ ತಂಡದಲ್ಲಿ ತಲಾ 12 ಮಂದಿ ಆಟಗಾರರಿರಲಿದ್ದು, 11 ಮಂದಿಗೆ ಬ್ಯಾಟಿಂಗ್ ಮಾಡುವ ಅವಕಾಶ ವಿರುತ್ತದೆ. ಅಂತೆಯೇ ಪ್ರತೀ ತಂಡ ತಲಾ 100 ಎಸೆತಗಳನ್ನು ಎದುರಿಸಲಿದೆ. ಇನ್ನು ಈ 12ನೇ ಆಟಗಾರನನ್ನು ಪರಿಸ್ಥಿತಿ ತಕ್ಕಂತೆ ಬಳಸಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಬ್ಯಾಟಿಂಗ್ ಮಾಡುತ್ತಿರುವ ತಂಡ ಇನ್ನಿಂಗ್ಸ್ ಅಂತಿಮ ಕ್ಷಣದಲ್ಲಿ ಓರ್ವ ಬ್ಯಾಟ್ಸಮನ್ ಅನ್ನು 12ನೇ ಆಟಗಾರನಾಗಿ ಆಯ್ಕೆ ಮಾಡಿಕೊಳ್ಳಬಹುದು. ಅಂತೆಯೇ ಬೌಲಿಂಗ್ ಮಾಡುವ ತಂಡ ಓರ್ವ ಸ್ಪೆಷಲ್ ಬೌಲರ್ ನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ವಿರುತ್ತದೆ.
ಅಂತೆಯೇ ಒಂದು ಓವರ್ ಗೆ 6 ಎಸೆತಗಳ ಬದಲಿಗೆ ಐದು ಎಸೆತಗಳಿಗೆ ಅವಕಾಶ ನೀಡಲಾಗುತ್ತದೆ. ಇದೇ ಮಾದರಿಯ ಕ್ರಿಕೆಟ್ ಅನ್ನು ಆಡಿಸಲು ಇದೀಗ ಇಸಿಬಿ ಮುಂದಾಗಿದೆ.
12 ಆಟಗಾರರ ಆಯ್ಕೆ ಇದೇ ಮೊದಲೇನಲ್ಲ
ಇನ್ನು ಸೂಪರ್ ಪ್ಲೇಯರ್ ಆಯ್ಕೆ ಇದೇ ಮೊದಲೇನಲ್ಲ. ಈ ಹಿಂದೆ ಟಿ20 ವಿಶ್ವಕಪ್ ಟೂರ್ನಿ ವೇಳೆ ಐಸಿಸಿ ಇಂತಹ ಒಂದು ಪರೀಕ್ಷೆಗೆ ಮುಂದಾಗಿತ್ತು. ಆದರೆ ಆ ಬಳಿಕ ಈ ಪರೀಕ್ಷೆಯನ್ನು ಕೈ ಬಿಟ್ಟಿತ್ತು. ಇದೀಗ ಈ ಸೂಪರ್ ಪ್ಲೇಯರ್ ಆಯ್ಕೆಯಷ್ಟೇ ಅಲ್ಲದೇ 100 ಎಸೆತಗಳ ಮಾದರಿ ಕ್ರಿಕೆಟ್ ಅನ್ನು ಪರಿಚಯಿಸಲು ಇಸಿಬಿ ಹೊರಟಿದೆ.
SCROLL FOR NEXT