ರಷೀದ್ ಬೌಲಿಂಗ್ ನಲ್ಲಿ ಅಚ್ಚರಿ ರೀತಿಯಲ್ಲಿ ಬಲಿಯಾಗಿದ್ದ ಕೊಹ್ಲಿ 
ಕ್ರಿಕೆಟ್

ನಂಬರ್ 1 ಟೀಂ ಇಂಡಿಯಾ ಮಣಿಸಲು ನಿವೃತ್ತಿಯಾಗಿದ್ದ ಆಟಗಾರನ ಕರೆತಂದ ಇಂಗ್ಲೆಂಡ್!

ಮುಂಬರುವ ಟೆಸ್ಟ್ ಸರಣಿಯಲ್ಲಿ ವಿಶ್ವದ ನಂಬರ್ 1 ತಂಡ ಟೀಂ ಇಂಡಿಯಾವನ್ನು ಮಣಿಸಲು ಪಣತೊಟ್ಟಿರುವ ಇಂಗ್ಲೆಂಡ್ ತಂಡ ಈಗಾಗಲೇ ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಿರುವ ಸ್ಪಿನ್ನರ್ ಅನ್ನು ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡುವ ಅಚ್ಚರಿ ಮೂಡಿಸಿದೆ.

ಲಂಡನ್: ಮುಂಬರುವ ಟೆಸ್ಟ್ ಸರಣಿಯಲ್ಲಿ ವಿಶ್ವದ ನಂಬರ್ 1 ತಂಡ ಟೀಂ ಇಂಡಿಯಾವನ್ನು ಮಣಿಸಲು ಪಣತೊಟ್ಟಿರುವ ಇಂಗ್ಲೆಂಡ್ ತಂಡ ಈಗಾಗಲೇ ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಿರುವ ಸ್ಪಿನ್ನರ್ ಅನ್ನು ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡುವ ಅಚ್ಚರಿ ಮೂಡಿಸಿದೆ.
ಹೌದು.. ಇದೇ ಆಗಸ್ಟ್​ 1 ರಿಂದ ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಆದಿಲ್ ರಶೀದ್‌ ಬುಲಾವ್ ನೀಡಿದೆ. ಇಂಗ್ಲೆಂಡ್ ನ ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಅದಿಲ್ ರಷೀದ್ ರನ್ನು ಆಯ್ಕೆ ಮಾಡಿದೆ. ಆ ಮೂಲಕ ನಿವೃತ್ತಿ ಘೋಷಿಸಿದ್ದ ಅದಿಲ್ ರಷೀದ್ ರನ್ನು ಮತ್ತೆ ಟೆಸ್ಟ್ ಕ್ರಿಕೆಟ್ ಗೆ ಇಂಗ್ಲೆಂಡ್ ತಂಡ ವಾಪಸ್ ಕರೆಸಿಕೊಂಡಿದೆ.
ಇಂಗ್ಲೆಂಡ್‌ ಪಿಚ್‌ಗಳಲ್ಲಿ ವೇಗದ ಜತೆಗೆ ಸ್ಪಿನ್‌ ಮೂಲಕವೂ ಭಾರತವನ್ನು ಕಟ್ಟಿ ಹಾಕಲು ಇಂಗ್ಲೆಂಡ್‌ ಪ್ಲಾನ್‌ ಮಾಡಿಕೊಂಡಿದ್ದು, ಹಾಗಾಗಿ ರಶೀದ್‌ರನ್ನು ಮತ್ತೆ ವಾಪಸ್‌ ಕರೆಸಿಕೊಳ್ಳಲಾಗಿದೆ. ಇತ್ತೀಚೆಗೆ ನಡೆದ ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ರಶೀದ್‌ ಉತ್ತಮ ಪ್ರದರ್ಶನ ನೀಡಿದ್ದರು. ಭಾರತದ ಪ್ರಮುಖ ವಿಕೆಟ್‌ ಕಿತ್ತು ಏಕದಿನ ಸರಣಿ ವಶ ಪಡಿಸಿಕೊಳ್ಳಲು ಸಹಕರಿಸಿದ್ದರು. ಪ್ರಮುಖವಾಗಿ ಭಾರತದ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಅದಿಲ್ ರಷೀದ್ ಔಟ್ ಮಾಡಿದ್ದ ಪರಿ ಕ್ರಿಕೆಟ್ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿತ್ತು. ಹೀಗಾಗಿ ಅದಿಲ್ ರಷೀದ್ ರಿಂದ ಇದೇ ರೀತಿಯ ಪ್ರದರ್ಶನವನ್ನು ಟೆಸ್ಟ್ ಸರಣಿಯಲ್ಲೂ ಇಂಗ್ಲೆಂಡ್ ತಂಡ ನಿರೀಕ್ಷಿಸುತ್ತಿದೆ. 
ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಇಂಗ್ಲೆಂಡ್ ತಂಡ ಇಂತಿದೆ.
ಜೋ ರೂಟ್ (ನಾಯಕ), ಅಲಸ್ಟರ್ ಕುಕ್, ಕೀಟನ್ ಜೆನ್ನಿಂಗ್ಸ್, ಡೇವಿಡ್ ಮಲಾನ್, ಜಾನಿ ಬೇರ್ ಸ್ಟೋ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಜಾಸ್ ಬಟ್ಲರ್, ಅದಿಲ್ ರಷೀದ್, ಸ್ಯಾಮ್ ಕುರನ್, ಸ್ಟುವರ್ಟ್ ಬ್ರಾಡ್, ಜಿಮ್ಮಿ ಆಂಡರ್ಸನ್, ಜಾಮಿ ಪೋರ್ಟರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!