ಶಿಖರ್ ಧವನ್ 
ಕ್ರಿಕೆಟ್

ಇಂಗ್ಲೆಂಡ್ ಪ್ರವಾಸ: ಸ್ಫೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಗೋಲ್ಡನ್ ಡಕೌಟ್ ವಿಡಿಯೋ!

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಗಸ್ಟ್ 1ರಿಂದ ಟೆಸ್ಟ್ ಸರಣಿಯನ್ನು ಆರಂಭಿಸಲಿದ್ದು ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಎಸ್ಸೆಕ್ಸ್ ವಿರುದ್ಧ...

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಗಸ್ಟ್ 1ರಿಂದ ಟೆಸ್ಟ್ ಸರಣಿಯನ್ನು ಆರಂಭಿಸಲಿದ್ದು ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಎಸ್ಸೆಕ್ಸ್ ವಿರುದ್ಧ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಗೋಲ್ಡನ್ ಡಕೌಟ್ ಆಗಿದ್ದಾರೆ. 
ಟಾಸ್ ಗೆದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಮೊದಲ ಎಸೆತದಲ್ಲೇ ಕೀಪರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. 
ಇನ್ನು ಟೀಂ ಇಂಡಿಯಾದ ಪರ ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ 53, ಅಜಿಂಕ್ಯ ರಹಾನೆ 17, ವಿರಾಟ್ ಕೊಹ್ಲಿ 68, ಕೆಎಲ್ ರಾಹುಲ್ 58, ದಿನೇಶ್ ಕಾರ್ತಿಕ್ 82, ಹಾರ್ದಿಕ್ ಪಾಂಡ್ಯ 51 ಹಾಗೂ ರಿಷಬ್ ಪಂತ್ ಅಜೇಯ 34 ರನ್ ಗಳಿಸಿದ್ದಾರೆ. 
ಎಸ್ಸೆಕ್ಸ್ ಪರ ಬೌಲಿಂಗ್ ನಲ್ಲಿ ವಾಲ್ಟೆರ್ 4, ಕೊಲೆಸ್ 2 ಮತ್ತು ಡಿಕ್ಸೊನ್, ಕ್ವಿನ್ ಹಾಗೂ ಬಿಯರ್ಡ್ ತಲಾ 1 ವಿಕೆಟ್ ಪಡೆದಿದ್ದಾರೆ. 
ಟೀಂ ಇಂಡಿಯಾ ಆಲೌಟ್ ಬಳಿಕ ಇನ್ನಿಂಗ್ಸ್ ಆರಂಭಿಸಿ ಎಸ್ಸೆಕ್ಸ್ 94 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದುಕೊಂಡು 359 ರನ್ ಪೇರಿಸಿ ಆಡುತ್ತಿದೆ. 
ಎಸ್ಸೆಕ್ಸ್ ಪರ ವೆಸ್ಟ್ಲಿ 57, ಪೆಪ್ಪೇರ್ 68, ಫಾಸ್ಟರ್ 42, ವಾಲ್ಟೆರ್ 75 ರನ್ ಗಳಿಸಿದ್ದಾರೆ. ಇನ್ನು ನಿಜಾರ್ ಅಜೇಯ 29 ಹಾಗೂ ಖುಷಿ 14 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. 
ಭಾರತ ಪರ ಬೌಲಿಂಗ್ ನಲ್ಲಿ ಉಮೇಶ್ ಯಾದವ್ 4, ಇಶಾಂತ್ ಶರ್ಮಾ 3 ಹಾಗೂ ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ