ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಅವರು 18 ತಿಂಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ಮರಳಿದ್ದು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣಕರ್ತರಾಗಿದ್ದರು.
ಆದರೆ ಇದೀಗ ಅವರ ಮತ್ತೊಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಕಾರಣವಾಗಿದೆ. ಹೌದು ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜೋಸ್ ಬಟ್ಲರ್ 80 ರನ್ ಸಿಡಿಸಿದ್ದರು. ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರಶಂಸೆಗೆ ಕಾರಣವಾಗಿತ್ತು. ಆದರೆ ಅವರ ಬ್ಯಾಟ್ ಮೇಲಿನ ಅಶ್ಲೀಲ ಬರಹ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಜೋಸ್ ಬಟ್ಲರ್ ತಮ್ಮ ಬ್ಯಾಟ್ ಮೇಲೆ 'ಫ... ಹಿಟ್' ಎಂದು ಬರೆದುಕೊಂಡಿದ್ದಾರೆ. ಇದೇ ಇದೀಗ ವಿವಾದಕ್ಕೆ ಕಾರಣವಾಗಿರುವುದು. ಜೋಸ್ ಬಟ್ಲರ್ ತಮ್ಮ ಅಭಿಪ್ರಾಯದಂತೆ ಎದುರಾಳಿಗಳನ್ನು ದಮನ ಮಾಡು ಎಂಬ ಅರ್ಥದಲ್ಲಿ ಅವರು ಈ ಬರಹವನ್ನು ಬ್ಯಾಟ್ ಮೇಲೆ ಬರೆದುಕೊಂಡಿದ್ದಾರೆ ಎಂದು ವಾದಿಸುತ್ತಿದ್ದರೆ ಇನ್ನು ಕೆಲವರು ಎದುರಾಳಿ ತಂಡದ ಕುರಿತು ಅಸಹ್ಯ ಹೇಳಿಕೆ ಎಂದು ಟ್ವೀಟ್ ಮಾಡುತ್ತಿದ್ದಾರೆ.
ಈ ಮಧ್ಯೆ ಜೋಸ್ ಬಟ್ಲರ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನನಗೆ ಬಾರಿ ಆತ್ಮವಿಶ್ವಾಸವನ್ನು ನೀಡಿತ್ತು. ಇದು ನನ್ನ ಅತ್ಯುತ್ತಮ ಪ್ರದರ್ಶನಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು.
ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ಪರ ಆಡಿದ್ದ ಜೋಸ್ ಬಟ್ಲರ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಕಳೆದ ಐಪಿಎಲ್ ನಲ್ಲಿ ತಂಡ ಪ್ಲೇ ಆಫ್ ಹಂತಕ್ಕೆ ತಲುಪಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics