ಕ್ರಿಕೆಟ್

ಮಹಿಳಾ ಏಷ್ಯಾ ಕಪ್ ಟಿ20: ಪಾಕಿಸ್ತಾನ ಬಗ್ಗುಬಡಿದ ಭಾರತ ಫೈನಲ್ ಗೆ ಲಗ್ಗೆ

Srinivasamurthy VN
ಕೌಲಾಲಂಪುರ: ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾ ಕಪ್ ಟಿ20 ಸರಣಿಯಲ್ಲಿ ಭಾರತದ ಜೈತ್ರ ಯಾತ್ರೆ ಮುಂದುವರೆದಿದ್ದು, ಪಾಕಿಸ್ತಾನ ತಂಡವನ್ನು ಭಾರತ ತಂಡ 7 ವಿಕೆಟ್ ಗಳ ಅಂತರದಲ್ಲಿ ಮಣಿಸಿದೆ.
ಪಾಕಿಸ್ತಾನ ನೀಡಿದ್ದ 73 ರನ್ ಗಳ ಗುರಿ ಬೆನ್ನು ಹತ್ತಿದ ಭಾರತ ತಂಡ 3 ವಿಕೆಟ್ ಕಳೆದುಕೊಂಡು ಕೇವಲ 16.1 ಓವರ್ ನಲ್ಲಿ 75 ರನ್ ಗಳಿ 7 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಪಾಕಿಸ್ತಾನದ ಎದುರು ಭಾರತ ಆರಂಭಿಕ ಆಘಾತ ಎದುರಿಸಿತು. ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್, ದೀಪ್ತಿ ಶರ್ಮಾ ಮತ್ತು ಶೂನ್ಯಕ್ಕೆ ಔಟ್ ಆದರು. ಆದರೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದಾಗಿ ಭಾರತ ಜಯ ಸಾಧಿಸಿತು. 
ಪಾಕಿಸ್ತಾನದ ಪರ ಅನಂ ಅಮೀನ್ 2 ವಿಕೆಟ್ ಪಡೆದರೆ, ನಶ್ರಾ ಸಂಧು 1 ವಿಕೆಟ್ ಪಡೆದರು. 
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ವನಿತೆಯರ ತಂಡದ ಸಾಂಘಿಕ ಬೌಲಿಂಗ್ ದಾಳಿಗೆ ಸಿಲುಕಿ ಪೆವಿಲಿಯನ್ ಪರೇಡ್ ನಡೆಸಿತು. ಆರಂಭಿಕ ಆಟಗಾರ್ತಿ ನಹಿದಾ ಖಾನ್ (18) ಮತ್ತು ಸನಾ ಮಿರ್ (ಅಜೇಯ 20 ರನ್) ಎರಡಂಕಿ ಮೊತ್ತ ದಾಟಿದ್ದು, ಬಿಟ್ಟರೆ ಉಳಿದ ಇನ್ಯಾವ ಆಟಗಾರ್ತಿಯರೂ ಎರಡಂಕಿ ದಾಟಲಿಲಲ್ಲ. ಪರಿಣಾಮ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಚಕ್ಕೆ ಕೇವಲ 72 ರನ್ ಗಳನ್ನಷ್ಟೇ ಗಳಿಸಿತು.
SCROLL FOR NEXT