ಮುಂಬೈ: ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್ ಗಳ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ಇದೀಗ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜತೆಗಿರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದು ಆ ಫೋಟೋ ಇದೀಗ ವೈರಲ್ ಆಗಿದೆ.
ಫೋಟೋದಲ್ಲಿ ಸಚಿನ್ ಮುಂದೆ ಸೆಹ್ವಾಗ್ ಮಂಡಿಯೂರಿ ಹನುಮಂತನಂತೆ ಕುಳಿತ್ತಿದ್ದು ಸಚಿನ್ ರಾಮನಂತೆ ನಿಂತಿದ್ದಾರೆ. ಈ ವಿಶೇಷ ಫೋಟೋವನ್ನು ಸೆಹ್ವಾಗ್ ಟ್ವೀಟ್ ಮಾಡಿದ್ದು ಈ ಫೋಟೋವನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಟೀಂ ಇಂಡಿಯಾದ ಖ್ಯಾತ ಬ್ಯಾಟ್ಸ್ ಮನ್ ಗಳಾಗಿದ್ದ ಸಚಿನ್ ಮತ್ತು ಸೆಹ್ವಾಗ್ ಹಲವು ಪಂದ್ಯಗಳಲ್ಲಿ ಭಾರತದ ಓಪನಿಂಗ್ ಬ್ಯಾಟ್ಸ್ ಮನ್ ಗಳಾಗಿ ಆಡಿದ್ದು ಎದುರಾಳಿ ಬೌಲರ್ ಗಳ ಬೆವರಿಳಿಸಿದ್ದರು.