ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಭಾರತ-ಆಘ್ಘಾನ್ ಐತಿಹಾಸಿಕ ಟೆಸ್ಟ್: ಹಾರ್ದಿಕ್ ಪಾಂಡ್ಯ ಅರ್ಧ ಶತಕ, ಭಾರತ 474/10

ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟಕ್ಕೆ 6 ವಿಕೆಟ್ ನಷ್ಟಕ್ಕೆ 347 ಕಲೆ ಹಾಕಿದ್ದ ಭಾರತ ಶುಕ್ರವಾರ ಹಾರ್ದಿಕ್ ಪಾಂಡ್ಯ ರ ನೆರವಿನಿಂದ.....

ಹಾರ್ದಿಕ್ ಪಾಂಡ್ಯ
Raghavendra Adiga
Updated On : 15 Jun 2018, 11:55 am
ಬೆಂಗಳೂರು:  ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟಕ್ಕೆ 6 ವಿಕೆಟ್ ನಷ್ಟಕ್ಕೆ 347 ಕಲೆ ಹಾಕಿದ್ದ ಭಾರತ  ಶುಕ್ರವಾರ ಹಾರ್ದಿಕ್ ಪಾಂಡ್ಯ ರ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಗಳಿಗೆ ಆಲ್ ಔಟ್ ಆಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಕರ್ಷಕ ಅರ್ಧ ಶಕತ  (71) ಗಳಿಸಿದ್ದಾರೆ.  
ದಿನದ ಪ್ರಾರಂಭದಲ್ಲಿ ರವಿಚಂದ್ರನ್ ಅಶ್ವಿನ್ (18) ಬೇಗನೇ ಔಟಾದರೆ ರವೀಂದ್ರ ಜಡೇಜಾ (20) ಉಮೇಶ್ ಯಾದವ್ (26*) ಇಶಾಂತ್ ಶರ್ಮಾ (8)  ಉತ್ತಮ ಮೊತ್ತ ಕಲೆಹಾಕಲು ನೆರವಾದರು.

Advertisement

Advertisement

ಹಾರ್ದಿಕ್ ಪಾಂಡ್ಯ ಒಟ್ಟು 94 ಎಸೆತಗಳಲ್ಲಿ 10 ಬೌಂಡರಿಗಳೊಡನೆ 71 ರನ್ ಗಳಿಸಿದ್ದರು.
ಆಫ್ಘಾನಿಸ್ತಾನ ಪರ ಯಮಿನ್ ಅಹ್ಮದ್‌ಜಾಯ್‌ 3, ವಫಾದಾರ್‌ 2, ರಾಶೀದ್ ಖಾನ್  2, ಮುಜೀಬ್ ಉರ್ ರೆಹ್ಮಾನ್ ಹಾಗೂ ಮೊಹಮ್ಮದ್ ನಬಿ ತಲಾ 1 ವಿಕೆಟ್ ಕಿತ್ತರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments