ಸಂಗ್ರಹ ಚಿತ್ರ 
ಕ್ರಿಕೆಟ್

ಗೆದ್ದರೂ ಆಫ್ಘನ್‌ಗೆ ಟ್ರೋಫಿ ನೀಡಿದ ಭಾರತ, ನಾಯಕ ರಹಾನೆ ನಡೆಗೆ ವ್ಯಾಪಕ ಪ್ರಶಂಸೆ

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಫ್ಘಾನಿಸ್ತಾನದ ವಿರುದ್ದ ಭರ್ಜರಿ ಗೆಲುವು ಸಾಧಿಸಿದರೂ, ಟ್ರೋಫಿಯನ್ನು ಮಾತ್ರ ಆಫ್ಘಾನಿಸ್ತಾನಕ್ಕೆ ಕ್ರೀಡಾಸ್ಪೂರ್ತಿ ಮೆರೆದಿದೆ.

ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಫ್ಘಾನಿಸ್ತಾನದ ವಿರುದ್ದ ಭರ್ಜರಿ ಗೆಲುವು ಸಾಧಿಸಿದರೂ, ಟ್ರೋಫಿಯನ್ನು ಮಾತ್ರ ಆಫ್ಘಾನಿಸ್ತಾನಕ್ಕೆ ಕ್ರೀಡಾಸ್ಪೂರ್ತಿ ಮೆರೆದಿದೆ.
ಪಂದ್ಯ ಮುಕ್ತಾಯದ ಬಳಿಕ ನಡೆದ ಪ್ರಶಸ್ತಿ ವಿತರಣೆ ಮತ್ತು ಫೋಟೋ ಸೆರಮನಿ ವೇಳೆ ಭಾರತ ತಂಡದ ನಾಯಕ ಅಂಜಿಕ್ಯಾ ರಹಾನೆ ಅಲ್ಲೇ ಪಕ್ಕದಲ್ಲೇ ನಿಂತು ಇದನ್ನು ವೀಕ್ಷಿಸುತ್ತಿದ್ದ ಆಫ್ಘಾನಿಸ್ತಾನ ಆಟಗಾರರನ್ನು ಕರೆದು ಜಂಟಿಯಾಗಿ ಪೋಸ್ ನೀಡುವಂತೆ ಹೇಳಿದರು. ರಹಾನೆ ಮಾತಿನಂತೆ ಆಗಮಿಸಿದ ಆಫ್ಘನ್ ಆಟಗಾರರು ಭಾರತ ತಂಡದ ಆಟಗಾರರೊಂದಿಗೆ ಪೋಸ್ ನೀಡಿದ್ದು ಮಾತ್ರವಲ್ಲದೇ ಟ್ರೋಫಿಯನ್ನೂ ಹಿಡಿದು ಸಂಭ್ರಮಿಸಿದರು.
ಇನ್ನು ಪಂದ್ಯ ಸೋತರೂ ಆಫ್ಘಾನಿಸ್ತಾನ ಮಾತ್ರ ಎಂದಿಗೂ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಸುಧೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ ಆತಿಥ್ಯ ನೀಡಿದ ರಹಾನೆ ನಡೆ ಇತರೆ ಆಟಗಾರರಿಗೆ ಮಾದರಿಯಾಗಿದೆ.  ಟೀಂ ಇಂಡಿಯಾ ನಾಯಕ ರಹಾನೆ ಕ್ರೀಡಾ ಸ್ಪೂರ್ತಿ ಮತ್ತು ಆತಿಥ್ಯಕ್ಕೆ ಕ್ರಿಕೆಟ್ ದಿಗ್ಗಜರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ