ಕ್ರಿಕೆಟ್

ಜೀವ ಬೆದರಿಕೆ: ಶಸ್ತ್ರಾಸ್ತ್ರ ಹೊಂದಲು ಪರವಾನಗಿಗೆ ಸಾಕ್ಷಿ ಧೋನಿ ಅರ್ಜಿ

Shilpa D
ರಾಂಚಿ: ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಹೊಂದಲು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಪರವಾನಗಿಗೆ ಅರ್ಜಿ ಸಲ್ಲಿಸಿದ್ದಾರೆ.
ಜಾರ್ಖಂಡ್ ರಾಜದಾನಿ ರಾಂಚಿ ಅಧಿಕಾರಿಗಳಿಗೆ ಮನವಿ ಮಾಡಿರುವ ಅವರು ಪಿಸ್ತೂಲ್ ಅಥವಾ 0.32 ಬೋರ್ ರಿವಾಲ್ವರ್ ಹೊಂದಲು ಲೈಸೆನ್ಸ್ ನೀಡುವಂತೆ ಕೋರಿದ್ದಾರೆ.
ರಾಂಚಿಯ ಕೆಲವು ಪ್ರದೇಶಗಳಿಗೆ ವಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ತಾವು ಏಕಾಂಗಿಯಾಗಿ ಹೋಗಬೇಕಾಗುತ್ತದೆ. ನನ್ನ ಜೀವಕ್ಕೆ ಬೆದರಿಕೆಯಿದೆ. ತನ್ನ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಅವಕಾಶ ನೀಡಬೇಕು ಅರ್ಜಿಯಲ್ಲಿ ನಮೂದಿಸಿದ್ದಾರೆ. 
SCROLL FOR NEXT