ಸಚಿನ್ ತೆಂಡೂಲ್ಕರ್ 
ಕ್ರಿಕೆಟ್

ಏಕದಿನ ಪಂದ್ಯದಲ್ಲಿ ಎರಡು ಚೆಂಡು: ಸಚಿನ್ ತೆಂಡೂಲ್ಕರ್ ಅಭಿಪ್ರಾಯವೇನು ಗೊತ್ತೇ?

ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 50 ಓವರ್ ಗಳಿಗೆ ಎರಡು ಚೆಂಡು ಬದಲಾಯಿಸುವ ಪ್ರಸ್ತಾವನೆ ಬಗ್ಗೆ ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದು, ಏಕದಿನ ಪಂದ್ಯದಲ್ಲಿ ಎರಡು ಚೆಂಡು...

ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 50 ಓವರ್ ಗಳಿಗೆ ಎರಡು ಚೆಂಡು ಬದಲಾಯಿಸುವ ಪ್ರಸ್ತಾವನೆ ಬಗ್ಗೆ ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದು, ಏಕದಿನ ಪಂದ್ಯದಲ್ಲಿ ಎರಡು ಚೆಂಡು ಬಳಕೆ ಮಾಡುವುದು ಕ್ರಿಕೆಟ್ ಕ್ರೀಡೆಗೆ ಹಾನಿಕಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಎರಡು ಚೆಂಡುಗಳನ್ನು ಬಳಕೆ ಮಾಡುವುದರಿಂದ ರಿವರ್ಸ್ ಸ್ವಿಂಗ್ ಮಾಡುವುದಕ್ಕೆ ಹೆಚ್ಚಿನ ಸಮಯ ಸಿಗುವುದಿಲ್ಲ, ಎರಡೂ ತಂಡಗಳಿಗೆ ಬ್ಯಾಟಿಂಗ್ ಮಾಡುವಾಗ ಹೊಸ ಚೆಂಡನ್ನು ನೀಡಿದರೆ ಕೊನೆಯ ಓವರ್ ಗಳಲ್ಲಿ ನಿರ್ದಿಷ್ಟ ತಂಡಕ್ಕೆ ಸಹಕಾರಿಯಾಗಲಿದೆ. ಇದು ಕ್ರಿಕೆಟ್ ನ ಕ್ರೀಡಾ ಮನೋಭಾವಕ್ಕೇ ಕುತ್ತಾಗಬಲ್ಲದು ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. 
ಐಸಿಸಿ ನಿಯಮಗಳನ್ನು ಬದಲಾವಣೆ ಮಾಡಿ ಪ್ರತಿ 25 ಓವರ್ ಗಳಿಗೆ ಚೆಂಡು ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ. ಆದರೆ ಕ್ರಿಕೆಟ್ ದೇವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ಹೊಸ ಚೆಂಡನ್ನು ಬಳಕೆ ಮಾಡುವುದರಿಂದ ಕ್ರಿಕೆಟ್ ಕ್ರೀಡೆಗೆ ಹಾನಿಕಾರಕ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

SCROLL FOR NEXT