ಕ್ರಿಕೆಟ್

ಜೂನ್ 22ರ ಬಿಸಿಸಿಐ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೊಳಿಸದಂತೆ ಸಿಒಎ ಸೂಚನೆ

Srinivas Rao BV

ನವದೆಹಲಿ: ಜೂ.22 ರಂದು ನಡೆದ ಬಿಸಿಸಿಐ ನ ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೊಳಿಸದಂತೆ ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತ ಸಮಿತಿ (ಸಿಒಎ)ಸ್ಪಷ್ಟ ಸೂಚನೆ ನೀಡಿದೆ.

ತಾಜ್ ಮಹಲ್ ಹೊಟೆಲ್ ನಲ್ಲಿ ಜೂ.22 ರಂದು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಂಡ ಹಲವಾರು ನಿರ್ಣಯಗಳ ಬಗ್ಗೆ ಸಿಒಎಗೆ ಬಿಸಿಸಿಐ ನ ಹಂಗಾಮಿ ಕಾರ್ಯದರ್ಶಿ ಪತ್ರದ ಮೂಲಕ ತಿಳಿಸಿದ್ದಾರೆ. ಆದರೆ ಸಿಒಎ ಮಾ.15 ರಂದು ನೀಡಿದ್ದ ನಿರ್ದೇಶನಗಳನ್ನು ಉಲ್ಲಂಘಿಸಿ ಸಭೆ ನಡೆಸಲಾಗಿದ್ದು, ಅಲ್ಲಿ ಕೈಗೊಂಡ ಯಾವುದೇ ನಿರ್ಣಯಗಳನ್ನೂ ಬಿಸಿಸಿಐನ ಯಾವುದೇ ಪದಾಧಿಕಾರಿಯೂ ಜಾರಿಗೊಳಿಸಬಾರದು ಎಂದು ಸಿಒಎ ಸೂಚನೆ ನೀಡಿದೆ.

ಸಿಒಎ ಅನುಮತಿ ಪಡೆಯದೆಯೇ ಬಿಸಿಸಿಐ ಸಭೆ ನಡೆಸಿದ್ದ ಬೆನ್ನಲ್ಲೇ ಅಲ್ಲಿ ಕೈಗೊಳ್ಳುವ ನಿರ್ಣಯಗಳು ಜಾರಿಯಾಗುವ ಬಗ್ಗೆ ಅನುಮಾನಗಳಿದ್ದವು. ಬಿಸಿಸಿಐನ ಸಾಮಾನ್ಯ ವಿಶೇಷ ಸಭೆಯಲ್ಲಿ ಭಾರತೀಯ ಕ್ರಿಕೆಟರ್ ಗಳ ಸೆಂಟ್ರಲ್ ಕಾಂಟ್ರಾಕ್ಟ್ ಗಳನ್ನು ಅಂತಿಮಗೊಳಿಸಲಾಗಿತ್ತು. ಇದೇ ವೇಳೆ ಉತ್ತರಾಖಂಡ್ ರಣಜಿ ಪಂದ್ಯವನ್ನಾಡುವ ಬಗ್ಗೆ ಸಾಮಾನ್ಯ ವಿಶೇಷ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿತ್ತು, ಆದರೆ ಸಿಒಎ ಈಗಾಗಲೇ ಉತ್ತರಾಖಂಡ್ ತಂಡ ರಣಜಿ ಪಂದ್ಯವನ್ನಾಡುವುದರ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಂದಿದ್ದು, ಈಶಾನ್ಯ ಹಾಗೂ ಬಿಹಾರ ರಾಜ್ಯಗಳೊಂದಿಗೆ ಉತ್ತರಾಖಂಡ್ ಸಹ ರಣಜಿ ಆಡಲಿದೆ ಎಂದು ಹೇಳಿದೆ.

SCROLL FOR NEXT