ಉಮರ್ ಅಕ್ಮಲ್ 
ಕ್ರಿಕೆಟ್

65 ರೂ.ಗೆ ಪಾಕ್ ಕ್ರಿಕೆಟಿಗ ಸೇಲ್!

ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಕಳಪೆ ಆಟ ಪ್ರದರ್ಶಿಸುತ್ತಿರುವ ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ವಿರುದ್ಧ ಪಾಕ್ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ...

ಕರಾಚಿ: ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಕಳಪೆ ಆಟ ಪ್ರದರ್ಶಿಸುತ್ತಿರುವ ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ವಿರುದ್ಧ ಪಾಕ್ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. 
ಪಾಕಿಸ್ತಾನದ ಅಭಿಮಾನಿಯೊಬ್ಬ ಉಮರ್ ಅಕ್ಮಲ್ ರನ್ನು ಇ-ಬೇನಲ್ಲಿ 65 ರೂ.(1 ಡಾಲರ್)ಗೆ ಮಾರಾಟಕ್ಕಿಟ್ಟು ವಿಶಿಷ್ಟವಾಗಿ ಟೀಕೆ ಮಾಡಿ ಸಿಟ್ಟು ತೀರಿಸಿಕೊಂಡಿದ್ದಾನೆ. ಇದಕ್ಕೆ ಹಲವಾರು ಮಂದಿ ಸ್ವಾರಸ್ಯಕರವಾಗಿ ಉತ್ತರ ನೀಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಪಾಕ್ ಸೂಪರ್ ಲೀಗ್ ಟಿ20 ಕ್ರಿಕೆಟ್ ನಲ್ಲಿ ಲಾಹೋರ್ ಖಲಂದರ್ಸ್ ತಂಡ ಸಹ ಒಂದು. ಬ್ರೆಂಡನ್ ಮೆಕಲಂ, ತಮೀಮ್ ಇಕ್ಬಾಲ್, ಡ್ವೈನ್ ಬ್ರಾವೋ, ಮೊಹಮ್ಮದ್ ಹಫೀಜ್ ಹಾಗೂ ಉಮರ್ ಅಕ್ಮಲ್ ರಂತಹ ಘಟಾನುಘಟಿಗಳು ತಂಡದಲ್ಲಿ ಇದ್ದರು ತಂಡದ ಆಡಿರುವ 5 ಪಂದ್ಯಗಳಲ್ಲೂ ಸೋಲು ಕಂಡಿದೆ. ಇದರಿಂದ ರೊಚ್ಚಿಗೆದ್ದಿರುವ ಅಭಿಮಾನಿಯೊಬ್ಬ ಫಾರ್ಮ್ ಕಂಡುಕೊಳ್ಳದ ಉಮರ್ ಅಕ್ಮಲ್ ಸೇರಿದಂತೆ ಲಾಹೋರ್ ಕ್ವಾಲೆಂಡರ್ಸ್ ತಂಡವನ್ನು ಮಾರಾಟಕ್ಕಿಟ್ಟಿದ್ದಾರೆ. 
ಇನ್ನು 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವೇಗಿ ವಹಾಬ್ ರಿಯಾಜ್ ಕಳಪೆ ಪ್ರದರ್ಶನ ನೀಡಿದ್ದರು. ಇದಕ್ಕೆ ಅಭಿಮಾನಿಯೊಬ್ಬ ವಹಾಬ್ ರನ್ನು ಇ-ಬೇನಲ್ಲಿ ಮಾರಾಟಕ್ಕಿದ್ದೇನೆ ಎಂದು ಪ್ರಕಟಿಸಿದ್ದು ಭಾರೀ ಸುದ್ದಿಯಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT