ಸಿಸಿಟಿವಿ ದೃಶ್ಯಾವಳಿ 
ಕ್ರಿಕೆಟ್

ಜಂಟಲ್‍ಮ್ಯಾನ್ ಗೇಮ್ ಕ್ರಿಕೆಟ್‌ನಲ್ಲಿ ಜಟಾಪಟಿ: ಡಿ'ಕಾಕ್ ಮೇಲೆ ಹಲ್ಲೆಗೆ ಮುಂದಾದ ಡೇವಿಡ್ ವಾರ್ನರ್!

ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ವೇಳೆ ಕ್ವಿಂಟನ್ ಡಿ'ಕಾಕ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರ ಮಧ್ಯೆ ಜಟಾಪಟಿ ನಡೆದಿದೆ...

ಡರ್ಬನ್: ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ವೇಳೆ ಕ್ವಿಂಟನ್ ಡಿ'ಕಾಕ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರ ಮಧ್ಯೆ ಜಟಾಪಟಿ ನಡೆದಿದೆ. 
ಕ್ರೀಡಾಸ್ಫೂರ್ತಿ ಮರೆತಿರುವ ಕ್ರಿಕೆಟ್ ಆಟಗಾರರು ಜಟಾಪಟಿಗೆ ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಮುಂದಾಗಿದೆ. 
ಕಿಂಗ್ಸ್ ಮೀಡ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ನ 4ನೇ ದಿನದ ಚಹಾ ವಿರಾಮದ ವೇಳೆ ವಾರ್ನರ್ ಮತ್ತು ಡಿ'ಕಾಕ್ ಮಧ್ಯೆ ಈ ಜಟಾಪಟಿ ನಡೆದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ತಮ್ಮ ಪತ್ನಿಯ ಕುರಿತಾಗಿ ಮೈದಾನದಲ್ಲಿ ಡಿಕಾಕ್ ಅಸಭ್ಯ ಪದಗಳನ್ನು ಪ್ರಯೋಗಿಸಿದ್ದರು ಎಂದು ವಾರ್ನರ್ ಆರೋಪಿಸಿದ್ದಾರೆ. 
ಚಹಾ ವಿರಾಮಕ್ಕಾಗಿ ಉಭಯ ತಂಡಗಳು ತಮ್ಮ ಡ್ರೆಸಿಂಗ್ ರೂಂಗೆ ಮರಳುವ ವೇಳೆ ಡಿಕಾಕ್ ಗೆ ವಾರ್ನರ್ ಡ್ರೆಸಿಂಗ್ ರೂಂನ ಮೆಟ್ಟಿಲುಗಳ ಬಳಿ ಕಾದು ನಿಂತಿದ್ದರು. ಡಿಕಾಕ್ ಅಲ್ಲಿಗೆ ಆಗಮಿಸುತ್ತಲೇ ಅವರ ವಿರುದ್ಧ ವಾರ್ನರ್ ಕೂಗಾಡಲು ಆರಂಭಿಸಿದರು. ಅಲ್ಲದೆ ಡಿಕಾಕ್ ಅವರ ಮೇಲೇರಿ ಹೋಗುವ ರೀತಿಯಲ್ಲಿ ಕೋಪೋದ್ರಿಕ್ತರಾಗಿ ಮುನ್ನುಗ್ಗಿದ್ದರು. ಈ ಸಂದರ್ಭದಲ್ಲಿ ಆಸೀಸ್ ತಂಡದ ಸಹ ಆಟಗಾರರು ವಾರ್ನರ್ ಅವರನ್ನು ಸಮಾಧಾನ ಪಡಿಸಿ ತಮ್ಮ ಡ್ರೆಸಿಂಗ್ ರೂಂಗೆ ಕರೆದೊಯ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಏನೇ ಶಾಂತಿ ಒಪ್ಪಂದವಾದ್ರೂ ನಾವು ಅಮೆರಿಕವನ್ನ ನಂಬಲ್ಲ: ಡೊನಾಲ್ಡ್ ಟ್ರಂಪ್ ಗೆ ಶಾಕ್ ಕೊಟ್ಟ Iran

2 ಕೋಟಿ ಇನ್ಷುರೆನ್ಸ್ ಹಣಕ್ಕಾಗಿ ಮಾಜಿ ಯೋಧನ ಕೊಲೆ: FSL ವರದಿಯನ್ನೇ ತಿರುಚಿದ ಖತರ್ನಾಕ್ ಗ್ಯಾಂಗ್, ಪತ್ನಿ, ಆಕೆಯ ಲವರ್ ಸೇರಿ 9 ಮಂದಿ ಬಂಧನ

ಹೇಡಿತನದ ಕೃತ್ಯ: ಜೈಪುರದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ Abhijeet Dipkeಗೆ ಕಪಾಳ ಮೋಕ್ಷ, ಹಲ್ಲೆ! Video

ಮುದುಕ ಗಂಡನ ಜೊತೆ ಖುಷಿಯಾಗಿದ್ದೀರಾ? ಅಭಿಮಾನಿಗೆ ಖಡಕ್ ತಿರುಗೇಟು ಕೊಟ್ಟ Bollywood ನಟ ಅರ್ಬಾಜ್ ಖಾನ್ ಪತ್ನಿ

Women's T20 World Cup 2026: ಪರಸ್ಪರ ಜುಟ್ಟು ಹಿಡಿದ ಭಾರತ-ಪಾಕ್ ಆಟಗಾರ್ತಿಯರು; 'ಜಗಳ' Video ವೈರಲ್; ಅಸಲಿಯತ್ತೇನು?

SCROLL FOR NEXT