ಡೇವಿಡ್ ವಾರ್ನರ್, ಕ್ವಿಂಟನ್ ಡಿಕಾಕ್ 
ಕ್ರಿಕೆಟ್

ಜಂಟಲ್‍ಮ್ಯಾನ್ ಗೇಮ್ ಕ್ರಿಕೆಟ್‌ನಲ್ಲಿ ಜಟಾಪಟಿ: ವಾರ್ನರ್-ಡಿಕಾಕ್‌ಗೆ ದಂಡ ವಿಧಿಸಿದ ಐಸಿಸಿ

ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ವೇಳೆ ಕ್ವಿಂಟನ್ ಡಿ'ಕಾಕ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್...

ಡರ್ಬನ್: ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ವೇಳೆ ಕ್ವಿಂಟನ್ ಡಿ'ಕಾಕ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ನಡುವಿನ ಜಟಾಪಟಿ ಹಿನ್ನೆಲೆ ಇಬ್ಬುರ ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ದಂಡ ವಿಧಿಸಿದೆ. 
ಡಿಕಾಕ್ ಹಾಗೂ ವಾರ್ನರ್ ಮೇಲೆ ನಿಂತಿ ಸಂಹಿತೆ ಉಲ್ಲಂಘನೆಯ ಆರೋಪದಡಿಯಲ್ಲಿ ದಂಡ ವಿಧಿಸಲಾಗಿದ್ದು ವಾರ್ನರ್ ಲೆವೆಲ್ 2 ಮತ್ತು ಡಿಕಾಕ್ ಲೆವೆಲ್ 1 ಮಟ್ಟವನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. 
ಕಿಂಗ್ಸ್ ಮೀಡ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ನ 4ನೇ ದಿನದ ಚಹಾ ವಿರಾಮದ ವೇಳೆ ವಾರ್ನರ್ ಮತ್ತು ಡಿ'ಕಾಕ್ ಮಧ್ಯೆ ಈ ಜಟಾಪಟಿ ನಡೆದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ತಮ್ಮ ಪತ್ನಿಯ ಕುರಿತಾಗಿ ಮೈದಾನದಲ್ಲಿ ಡಿಕಾಕ್ ಅಸಭ್ಯ ಪದಗಳನ್ನು ಪ್ರಯೋಗಿಸಿದ್ದರು ಎಂದು ವಾರ್ನರ್ ಆರೋಪಿಸಿದ್ದಾರೆ.
ಚಹಾ ವಿರಾಮಕ್ಕಾಗಿ ಉಭಯ ತಂಡಗಳು ತಮ್ಮ ಡ್ರೆಸಿಂಗ್ ರೂಂಗೆ ಮರಳುವ ವೇಳೆ ಡಿಕಾಕ್ ಗೆ ವಾರ್ನರ್ ಡ್ರೆಸಿಂಗ್ ರೂಂನ ಮೆಟ್ಟಿಲುಗಳ ಬಳಿ ಕಾದು ನಿಂತಿದ್ದರು. ಡಿಕಾಕ್ ಅಲ್ಲಿಗೆ ಆಗಮಿಸುತ್ತಲೇ ಅವರ ವಿರುದ್ಧ ವಾರ್ನರ್ ಕೂಗಾಡಲು ಆರಂಭಿಸಿದರು. ಅಲ್ಲದೆ ಡಿಕಾಕ್ ಅವರ ಮೇಲೇರಿ ಹೋಗುವ ರೀತಿಯಲ್ಲಿ ಕೋಪೋದ್ರಿಕ್ತರಾಗಿ ಮುನ್ನುಗ್ಗಿದ್ದರು. ಈ ಸಂದರ್ಭದಲ್ಲಿ ಆಸೀಸ್ ತಂಡದ ಸಹ ಆಟಗಾರರು ವಾರ್ನರ್ ಅವರನ್ನು ಸಮಾಧಾನ ಪಡಿಸಿ ತಮ್ಮ ಡ್ರೆಸಿಂಗ್ ರೂಂಗೆ ಕರೆದೊಯ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ಸಂಪೂರ್ಣ 'ಕುಸಿಯುತ್ತಿದೆ'; ಹಾರ್ಮುಜ್ ತೆರೆಯುವಂತೆ ಟೆಹ್ರಾನ್ ಬೇಡಿಕೊಳ್ಳುತ್ತಿದೆ: ಟ್ರಂಪ್

ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ: ಹಣಕ್ಕಾಗಿ ಹೂತಿಟ್ಟ ಸಹೋದರಿ ಶವವನ್ನೇ ಬ್ಯಾಂಕ್​ಗೆ ಹೊತ್ತು ತಂದ ವ್ಯಕ್ತಿ!

IPL 2026: ಜೈಸ್ವಾಲ್, ಫೆರೀರಾ ಅಬ್ಬರಕ್ಕೆ ಪಂಜಾಬ್ ತತ್ತರ; PBKS ವಿರುದ್ಧ RR ಭರ್ಜರಿ ಗೆಲುವು

CM ಸಿದ್ದರಾಮಯ್ಯ ಪದತ್ಯಾಗಕ್ಕೂ ಸಿದ್ಧರಾಗಿದ್ದಾರೆ: ಮಾಜಿ ಸಚಿವ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ಮುಂದಿನ ತಿಂಗಳು ಭಾರತಕ್ಕೆ ಬರಲಿದೆ S-400 ಕ್ಷಿಪಣಿ 4ನೇ ಘಟಕ!

SCROLL FOR NEXT