ಸುನೀಲ್ ಗವಾಸ್ಕರ್ 
ಕ್ರಿಕೆಟ್

ಗವಾಸ್ಕರ್ ನಾಗಿನ್ ಡ್ಯಾನ್ಸ್ ನೋಡಿ ಬಾಂಗ್ಲಾ ಅಭಿಮಾನಿಗಳು ಉರಿದುಕೊಂಡಿದ್ದು ಯಾಕೆ ಗೊತ್ತಾ!

ನಿಡಾಹಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ವಿರೋಚಿತ ಗೆಲುವು ಸಾಧಿಸಿದೆ...

ನಿಡಾಹಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ವಿರೋಚಿತ ಗೆಲುವು ಸಾಧಿಸಿದೆ. 
ಈ ಪಂದ್ಯದ ನಡುವೆ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ನಾಗಿನ್ ಡ್ಯಾನ್ಸ್ ಮಾಡಿದ್ದು ಇದಕ್ಕೆ ಬಾಂಗ್ಲಾದೇಶದ ಅಭಿಮಾನಿಗಳು ಉರಿದುಕೊಂಡು ಟ್ವೀಟ್ ಮಾಡಿದ್ದಾರೆ. 
ಹೌದು ಪಂದ್ಯದ ವಿಮರ್ಶೆಗಾರರಾಗಿದ್ದ ಸುನೀಲ್ ಗವಾಸ್ಕರ್ ಅವರು ಪಂದ್ಯದ ನಡುವೆ ನಾಗಿನ್ ಡ್ಯಾನ್ಸ್ ಮಾಡಿದ್ದರು. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ ಮತ್ತು ಆಮೀರ್ ಸೋಹಿಲ್ ಗವಾಸ್ಕರ್ ನಾಗಿನ್ ಡ್ಯಾನ್ಸ್ ನೋಡಿ ಸಂತೋಷ ಪಟ್ಟಿದ್ದರು. ಆದರೆ ಫೈನಲ್ ನಲ್ಲಿ ಪಂದ್ಯ ಸೋತ್ತಿದ್ದರಿಂದ ಆಕ್ರೋಶಗೊಂಡಿರುವ ಬಾಂಗ್ಲಾ ಅಭಿಮಾನಿಗಳು ಗವಾಸ್ಕರ್ ವಿರುದ್ಧ ಟ್ವೀಟ್ ಮಾಡುವ ಮೂಲಕ ತಮ್ಮ ಸಿಟ್ಟನ್ನು ಹೊರ ಹಾಕುತ್ತಿದ್ದಾರೆ. 
ಬಾಂಗ್ಲಾದೇಶ ಆಟಗಾರರ ನಾಗಿನ್ ಡ್ಯಾನ್ಸ್ ಸರಣಿ ಆರಂಭವಾಗಿದ್ದು, ಬಾಂಗ್ಲಾದೇಶದಲ್ಲಿ. ಹೌದು ಕಳೆದ ವರ್ಷ ಶ್ರೀಲಂಕಾ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡಿತ್ತು. ಬಾಂಗ್ಲಾ ವಿರುದ್ಧ ಮೊದಲ ಪಂದ್ಯದಲ್ಲಿ ಬಾಂಗ್ಲಾ ಆಟಗಾರ ನಜ್ಮುಲ್ ಇಸ್ಲಾಂ ಉಪುಲ್ ತರಂಗಾರನ್ನು ಔಟ್ ಮಾಡಿದ ಬಳಿಕ ಮೈದಾನದಲ್ಲಿ ಸಂಭ್ರಮ ವ್ಯಕ್ತಪಡಿಸುವ ವೇಳೆ ನಾಗಿನ್ ಡ್ಯಾನ್ಸ್ ಮಾಡಿದ್ದರು. ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಈ ಘಟನೆಗೆ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಕೂಡ ಇಸ್ಲಾಂಗೆ ಸಾಥ್ ನೀಡಿದ್ದರು.
ಆ ಬಳಿಕ ಈ ಘಟನೆ ಮತ್ತೆ ಮರುಕಳಿಸಿದ್ದು ಕಳೆದ ಶುಕ್ರವಾರ. ಅಂದರೆ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಡುವಿನ ಪಂದ್ಯದಲ್ಲಿ. ಈ ಪಂದ್ಯದಲ್ಲಿ ಅಂದು ಬಾಂಗ್ಲಾದಲ್ಲಿ ನಾಗಿನ್ ಡ್ಯಾನ್ಸ್ ಮಾಡಿದ್ದ ರಹೀಂ 25ರನ್ ಗಳಿಸಿ ಲಂಕಾದ ಅಮಿಲಾ ಅಪೊನ್ಸೋ ಬೌಲಿಂಗ್ ನಲ್ಲಿ ಔಟ್ ಆಗಿದ್ದರು. ಈ ವೇಳೆ ಅಪೋನ್ಸೋ ಕೂಡ ರಹೀಮ್ ರನ್ನು ಪುಂಗಿ ಉದುವ ರೀತಿಯಲ್ಲಿ ಅಣಕಿಸಿ ಪೆವಿಲಿಯನ್ ಗೆ ಹೋಗುವಂತೆ ಸೂಚಿಸಿದರು. ಆದರೆ ಆ ಬಳಿಕ ಪಂದ್ಯ ಬಿಸಿ ಏರಿಲ ಪಂದ್ಯ ರೋಚಕ ಅಂತ್ಯ ಕಂಡಿತ್ತು. ಅಲ್ಲದೆ ಮೈದಾನದಲ್ಲಿ ನಡೆದ ಕೆಲ ಪ್ರಚೋದನಕಾರಿ ಘಟನೆಗಳು ಬಾಂಗ್ಲಾ ಆಟಗಾರರು ಮೈದಾನದಲ್ಲೇ ನಾಗಿನ್ ಡ್ಯಾನ್ಸ್ ಮಾಡುವಂತೆ ಮಾಡಿದ್ದವು. ಶ್ರೀಲಂಕಾ ಪಂದ್ಯ ಸೋತ ಬಳಿಕ ಬಾಂಗ್ಲಾ ಕ್ರಿಕೆಟಿಗರು ಮತ್ತು ಅಭಿಮಾನಿಗಳು ನಾಗಿನ್ ಡ್ಯಾನ್ಸ್ ಮಾಡಿ ಲಂಕಾ ಅಭಿಮಾನಿಗಳನ್ನು ಕೆಣಕಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ