ಸದ್ಯ ಕ್ರಿಕೆಟ್ ವಲಯದಲ್ಲಿ ಬಾಲ್ ಟ್ಯಾಂಪರಿಂಗ್ ಸುದ್ದಿನೇ ತೀವ್ರ ಚರ್ಚೆಯಾಗುತ್ತಿರುವ ವಿಷಯ. ಅದರಲ್ಲೂ ಈ ಬಾರಿ ಬಾಲ್ ಟ್ಯಾಂಪರಿಂಗ್ ನಿಂದ ಆಸ್ಟ್ರೇಲಿಯಾ ವಿಶ್ವದ ತಲೆ ತಗ್ಗಿಸುವಂತಾಗಿದೆ.
ಹೌದು. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ಕ್ಯಾಮರಾನ್ ಬೆನ್ ಕ್ರಾಫ್ಟ್ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ತಂಡದ ನಾಯಕತ್ವವನ್ನೇ ಕಳೆದುಕೊಳ್ಳಬೇಕಾಯಿತು.
ಈ ಹಿಂದೆ ಬಾಲ್ ಟ್ಯಾಂಪರಿಂಗ್ ಮಾಡಲು ಬಳಲುತ್ತಿದ್ದ ಉಪಕರಣಗಳು ಇದೀಗ ಬದಲಾಗಿದೆ. ಮಿಂಟ್, ಜಿಪ್ಪರ್, ಉಗುರು, ಹಲ್ಲು ಇದೀಗ ಮಣ್ಣಿನ ಪೇಪರ್. ಕಾಲ ಬದಲಾದಂತೆ ಆಟಗಾರರು ಬಾಲ್ ಟ್ಯಾಂಪರಿಂಗ್ ಗೆ ಹೊಸ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೇಸಿಸ್ 2013ರಲ್ಲಿ ತಮ್ಮ ಪ್ಯಾಂಟ್ ಜೇಬಿನ ಜಿಪ್ ಗೆ ಉಜ್ಜ ವಿರೂಪಗೊಳಿಸಿದ್ದರು. 2016ರಲ್ಲಿ ಮತ್ತೆ ಡುಪ್ಲೇಸಿಸ್ ಬಾಯಲ್ಲಿದ್ದ ಮಿಂಟ್ ತೆಗೆದು ಚೆಂಡಿಗೆ ಉಜ್ಜಿದ್ದರು. ಈ ಎರಡು ಪ್ರಕರಣಗಳಲ್ಲಿ ಡುಪ್ಲೇಸಿಸ್ ಶಿಕ್ಷೆಗೂ ಗುರಿಯಾಗಿದ್ದರು.
ಆಫ್ರಿಕಾದ ವೇಗಿ ವೆರ್ನಾನ್ ಫಿಲಾಂಡರ್ ಮತ್ತು ಪಾಕಿಸ್ತಾನದ ವೇಗಿ ವಕಾರ್ ಯೂನಿಸ್ ಸಹ ಉಗುರನ್ನು ಬಳಸಿ ಬಾಲ್ ಟ್ಯಾಂಪರಿಂಗ್ ಮಾಡಿದ್ದರು. ಇಂತಹ ಬಾಲ್ ಟ್ಯಾಂಪರಿಂಗ್ ವಿಷಯದಲ್ಲಿ ಭಾರೀ ಸುದ್ದಿಯಾಗಿದ್ದು ಶಾಹಿದ್ ಆಫ್ರಿದಿ. ಆಫ್ರಿದಿ ತಮ್ಮ ಹಲ್ಲಿನಿಂದ ಬಾಲ್ ಅನ್ನು ಕಚ್ಚುವ ಮೂಲಕ ಚೆಂಡನ್ನು ವಿರೂಪಗೊಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics