ಕ್ರಿಕೆಟ್

ಚೆಂಡು ವಿರೂಪಗೊಳಿಸಿದ ಪ್ರಕರಣ; ಆಸಿಸ್ ಕೋಚ್ ಸ್ಥಾನಕ್ಕೆ ಲೆಹ್ಮನ್ ರಾಜಿನಾಮೆ

Srinivasamurthy VN
ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಮುಜುಗರಕ್ಕೀಡಾಗಿರುವ ಆಸ್ಚ್ರೇಲಿಯಾ ತಂಡದ ಕೋಟ್ ಡಾರೆನ್ ಲೆಹ್ಮನ್ ತಮ್ಮ ಕೋಚ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತವರು ಆಸ್ಟ್ರೇಲಿಯಾ ಸೇರಿದಂತೆ ವಿಶ್ವಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿರುವ ಆಸಿಸ್ ನಾಯಕ ಸ್ಟೀವ್ ಸ್ಮಿತ್ ವಜಾಗೂ ಭಾರಿ ಒತ್ತಡ ಕೇಳಿಬರುತ್ತಿದ್ದು, ಇತ್ತ ಇಂದು ಆಸ್ಟ್ರೇಲಿಯಾ ತಂಡದ ಕೋಚ್ ಡಾರೆನ್ ಲೆಹ್ಮನ್ ತಮ್ಮಕೋಚ್ ಸ್ಥಾನಕ್ಕ ಇಂದು ರಾಜಿನಾಮೆ ನೀಡಿದ್ದಾರೆ ಎಂದು ಆಸ್ಚ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆ. 
ಅಂಗಣಕ್ಕೆ ಬಂದ ವಾಕಿ ಟಾಕಿ?
ಚೆಂಡು ವಿರೂಪಗೊಳಿಸಿದ ಆರೋಪದ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡ ಮತ್ತೊಂದು ಆರೋಪಕ್ಕೆ ಸಿಲುಕಿದೆ. ತಂಡದ ಕಾಯ್ದಿರಿಸಿದ ಆಟಗಾರ ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಅಂಗಣಕ್ಕೆ ವಾಕಿ ಟಾಕಿ ಜೊತೆ ತೆರಳಿದ್ದು ಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಚೆಂಡು ವಿರೂಪಗೊಳಿಸಲು ಬಳಸಿದ ವಸ್ತುವನ್ನು ಒಳ ಉಡುಪಿನ ಒಳಗೆ ಬಚ್ಚಿಡುವಂತೆ ಕೋಚ್ ಡಾರೆನ್ ಲೆಹ್ಮನ್ ಸೂಚಿಸಿದ್ದರು ಎನ್ನಲಾಗಿದೆ. ಪಾನೀಯ ವಿರಾಮದ ಸಂದರ್ಭದಲ್ಲಿ ಬ್ಯಾಂಕ್ರಾಫ್ಟ್ ಅವರಿಗೆ ಈ ಮಾಹಿತಿಯನ್ನು ಪೀಟರ್‌ ಹ್ಯಾಂಡ್ಸ್‌ಕಾಂಬ್‌ ತಲುಪಿಸಿದ್ದರು. ಈ ಸಂದರ್ಭದಲ್ಲಿ ಅವರು ವಾಕಿಟಾಕಿ ಜೊತೆ ಬಂದಿರುವುದು ದೃಶ್ಯಾವಳಿಗಳಲ್ಲಿ ಕಾಣಿಸಿದೆ. ಈ ದೃಶ್ಯಾವಳಿಗಳನ್ನು ದೃಶ್ಯ ಮಾಧ್ಯಮಗಳು ಸೋಮವಾರ ನಿರಂತರವಾಗಿ ಪ್ರಸಾರ ಮಾಡಿವೆ.
ತನಿಖೆ ಆರಂಭಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ
ಚೆಂಡು ವಿರೂಪಗೊಳಿಸಿದ ಪ್ರಕರಣವನ್ನು ತನಿಖೆಗೆ ಒಳಪಡಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ) ನಿರ್ಧರಿಸಿದೆ. ಸಿಎ ಸೌಹಾರ್ದ ಘಟಕದ ಮುಖ್ಯಸ್ಥ ಇಯಾನ್ ರಾಯ್‌ ಮತ್ತು ಹೈ ಪರ್ಫಾರ್ಮೆನ್ಸ್‌ ವ್ಯವಸ್ಥಾಪಕ ಪ್ಯಾಟ್ ಹೊವಾರ್ಡ್ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಕ ಮಾಡಿದ್ದು ಅವರು ಸೋಮವಾರ ಕೇಪ್‌ಟೌನ್‌ ತಲುಪಿದ್ದಾರೆ. ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಆಟಗಾರರನ್ನು ವಿಚಾರಣೆಗೆ ಒಳಪಡಿಸಲಿರುವ ಅಧಿಕಾರಿಗಳು ನಾಲ್ಕನೇ ಟೆಸ್ಟ್‌ಗಾಗಿ ತಂಡ ಜೊಹಾನ್ಸ್‌ಬರ್ಗ್‌ಗೆ ತೆರಳುವ ಮುನ್ನ ಮಾಹಿತಿ ಕಲೆ ಹಾಕಲಿದ್ದಾರೆ ಎಂದು ತಿಳಿಸಲಾಗಿದೆ.
SCROLL FOR NEXT