ಕ್ರಿಕೆಟ್

ಆಟಗಾರರಿಗೆ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿ ಬಗ್ಗೆ ಚಿಂತನೆ: ಐಸಿಸಿ

Srinivas Rao BV
ಲಂಡನ್: ಚೆಂಡು ವಿರೂಪಗೊಳಿಸುವುದು, ಸ್ಲೆಡ್ಜಿಂಗ್ ನಂತಹ ಅಪರಾಧಗಳನ್ನು ತಡೆಗಟ್ಟಲು ಆಟಗಾರರಿಗೆ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್ ಸನ್ ಹೇಳಿದ್ದಾರೆ. 
ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್ ಚೆಂಡು ವಿರೂಪಗೊಳಿಸಿರುವ ಆರೋಪದಡಿ ಒಂದು ವರ್ಷ ನಿಷೇಧ ಎದುರಿಸುತ್ತಿದ್ದು, ಮತ್ತೋರ್ವ ಆಟಗಾರನಿಗೆ 9 ತಿಂಗಳ ನಿಷೇಧ ವಿಧಿಸಲಾಗಿದೆ. ಮೂರು ಜನ ಆಟಗಾರರು ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. 
ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಡೇವಿಡ್ ರಿಚರ್ಡ್ ಸನ್, ಆಟಗಾರರಿಗೆ ವಿಧಿಸಲಾಗುವ ನೀತಿ ಸಂಹಿತೆಯನ್ನು ಮತ್ತಷ್ಟು ಕಠಿಣಗೊಳಿಸಲು ಐಸಿಸಿ ಚಿಂತನೆ ನಡೆಸಿದೆ. ಜಾರಿಯಾಗಲು ಒಂದಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
SCROLL FOR NEXT