ಕ್ರಿಕೆಟ್

ಅಡಿಲೇಡ್ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಭಾರತ ನಿರಾಕರಣೆ

Srinivasamurthy VN
ಸಿಡ್ನಿ: ಅಡಿಲೇಡ್ ನಲ್ಲಿ ಆಯೋಜನೆಯಾಗಿದ್ದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಭಾರತ ನಿರಾಕರಣೆ ವ್ಯಕ್ತಪಡಿಸಿರುವುದರಿಂದ ಹಗಲಿನಲ್ಲೇ ಪಂದ್ಯವನ್ನಾಡಿಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಂಗಳವಾರ ಸ್ಪಷ್ಟನೆ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ತಮಗೆ ಬಿಸಿಸಿಐ ನಿಂದ ಈ ಬಗ್ಗೆ ಸ್ಪಷ್ಟನೆ ಬಂದಿದ್ದು, ಭಾರತ ತಂಡ ಹಗಲು-ರಾತ್ರಿ ಪಂದ್ಯಕ್ಕೆ ಸಿದ್ಧತೆ ನಡೆಸದೇ ಇರುವುದರಿಂದ ತಾನು ಅಡಿಲೇಡ್ ಹಗಲು-ರಾತ್ರಿ ಪಂದ್ಯವನ್ನಾಡಲು ತಯಾರಿಲ್ಲ ಎಂದು ಹೇಳಿದೆ. ಹೀಗಾಗಿ ಹಗಲು-ರಾತ್ರಿ ಪಂದ್ಯದ ಬದಲಿಗೆ ಹಗಲಿನ ಪಂದ್ಯವನ್ನೇ ಆಡಿಸಲು ನಿರ್ಧರಿಸಲಾಗಿದೆ. ಡಿಸೆಂಬರ್ 6ರಿಂದ ಅಡಿಲೇಡ್ ನಲ್ಲಿ ಆರಂಭವಾಗಲಿರುವ ಪಂದ್ಯ ಹಗಲಿನ ಪಂದ್ಯವಾಗಿರಲಿದೆ ಎಂದು ಹೇಳಿದೆ.
ಭಾರತದ ನಿರ್ಧಾರದಿಂದ ಅಡಿಲೇಡ್ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿರಬಹುದು. ಆದರೆ ಜನವರಿಯಲ್ಲಿ ಗಬ್ಬಾ ಮೈದಾನದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಯೋಜನೆಯಾಗಿದೆ. ಹೀಗಾಗಿ ಅಲ್ಲಿ ಅಭಿಮಾನಿಗಳು ಹಗಲು-ರಾತ್ರಿ ಟೆಸ್ಟ್ ಪಂದ್ಯದ ರಸದೌತಣ ಸವಿಯಬಹುದು ಎಂದು ಹೇಳಿದ್ದಾರೆ. ಅಲ್ಲದೆ ಇನ್ನು ಮುಂದೆ ಆಸ್ಟ್ರೇಲಿಯಾದಲ್ಲಿ ಬೇಸಿಗೆಯಲ್ಲಿ ನಡೆಯುವ ಪ್ರತೀ ಟೆಸ್ಟ್ ಟೂರ್ನಿಯಲ್ಲಿ ಒಂದು ಪಂದ್ಯವನ್ನು ಹಗಲು-ರಾತ್ರಿಯಲ್ಲಿ ಆಡಿಸಲು ತೀರ್ಮಾನಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.
ಪ್ರಸ್ತುತ ಬಿಡುಗಡೆಯಾಗಿರುವ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಇಂತಿದೆ.
ಮೂರು ಪಂದ್ಯಗಳ ಟಿ20 ಸರಣಿ
ನವೆಂಬರ್ 21 ರಂದು ಮೊದಲ ಟಿ20 ಪಂದ್ಯ, ಬ್ರಿಸ್ಬೇನ್ ನ ಗಬ್ಬಾ ಕ್ರೀಡಾಂಗಣ
ನವೆಂಬರ್ 23ರಂದು 2ನೇ ಟಿ20 ಪಂದ್ಯ, ಮೆಲ್ಬೋರ್ನ್ ನ ಎಂಸಿಜಿ ಕ್ರೀಡಾಂಗಣ
ನವೆಂಬರ್ 25ರಂದು 3ನೇ ಟಿ20 ಪಂದ್ಯ, ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣ
-----
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ
ಡಿಸೆಂಬರ್ 6 ರಿಂದ 10, ಮೊದಲ ಟೆಸ್ಟ್ ಪಂದ್ಯ. ಅಡಿಲೇಡ್ ನ ಓವಲ್ ಕ್ರೀಡಾಂಗಣ
ಡಿಸೆಂಬರ್ 14 ರಿಂದ 18, ಎರಡನೇ ಟೆಸ್ಟ್ ಪಂದ್ಯ, ಪರ್ತ್
ಡಿಸೆಂಬರ್ 26 ರಿಂದ 30, ಮೂರನೇ ಟೆಸ್ಟ್ ಪಂದ್ಯ, ಮೆಲ್ಬೋರ್ನ್ ನ ಎಂಸಿಜಿ ಕ್ರೀಡಾಂಗಣ
2019 ಜನವರಿ 3 ರಿಂದ 7, ನಾಲ್ಕನೇ ಟೆಸ್ಟ್ ಪಂದ್ಯ, ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣ
-----
ಮೂರು ಪಂದ್ಯಗಳ ಏಕದಿನ ಸರಣಿ
2019 ಜನವರಿ 12, ಮೊದಲ ಏಕದಿನ ಪಂದ್ಯ, ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣ
2019 ಜನವರಿ 15, ಎರಡನೇ ಏಕದಿನ ಪಂದ್ಯ, ಅಡಿಲೇಡ್ ನ ಓವಲ್ ಕ್ರೀಡಾಂಗಣ
2019 ಜನವರಿ 15, ಮೂರನೇ ಏಕದಿನ ಪಂದ್ಯ, ಮೆಲ್ಬೋರ್ನ್ ನ ಎಂಸಿಜಿ ಕ್ರೀಡಾಂಗಣ
SCROLL FOR NEXT