ಸಂಗ್ರಹ ಚಿತ್ರ 
ಕ್ರಿಕೆಟ್

ಐಪಿಎಲ್ 2018: ಪ್ರಶಸ್ತಿ ವಿಜೇತ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು ಗೊತ್ತಾ?

ಬಿಸಿಸಿಐನ ಮಿಲಿಯನ್ ಡಾಲರ್ ಬೇಬಿ ಐಪಿಎಲ್ 2018ರ ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಪ್ರಶಸ್ತಿಗಾಗಿ ಕಾದಾಟ ನಡೆಯುತ್ತಿವೆ.

ಮುಂಬೈ: ಬಿಸಿಸಿಐನ ಮಿಲಿಯನ್ ಡಾಲರ್ ಬೇಬಿ ಐಪಿಎಲ್ 2018ರ ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಪ್ರಶಸ್ತಿಗಾಗಿ ಕಾದಾಟ ನಡೆಯುತ್ತಿವೆ.
ಟೂರ್ನಿಗೆ ಅಪಾರ ಪ್ರೇಕ್ಷಕರ ಬೆಂಬಲ ಹಾಗೂ ಕೋಟ್ಯಂತರ ಟಿವಿ ವೀಕ್ಷಕರ ಮೂಲಕ ಭಾರಿ ಪ್ರಮಾಣದ ಆದಾಯವೇ ಬಂದಿದೆ. ಇದಲ್ಲದೆ ಜಾಹಿರಾತುಗಳ ಮೂಲಕವೂ ಬಿಸಿಸಿಐ ಕೋಟ್ಯಂತರ ಹಣ ಬಾಚಿದೆ. ಹಾಗಾದರೆ ಪ್ರಶಸ್ತಿ ಗೆದ್ದ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು ಗೊತ್ತಾ...?
ಹೌದು. ಇಂದು ನಡೆಯುತ್ತಿರುವ ಐಪಿಎಲ್ 2018 ಪೈನಲ್ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ಬರೊಬ್ಬರಿ 20 ಕೋಟಿ ರೂ. ನಗದು ಬಹುಮಾನ ಕೂಡ ದೊರೆಯಲಿದೆ. ಆಯೋಜಕರು ಪ್ರಶಸ್ತಿ ವಿಜೇತ ತಂಡದ ನಾಯಕನಿಗೆ 20 ಕೋಟಿ ರೂ. ಚೆಕ್ ವಿತರಿಸಲಿದ್ದಾರೆ. ಅಂತೆಯೇ ರನ್ನರ್ ಅಪ್ ತಂಡಕ್ಕೆ 12.5 ಕೋಟಿ ರೂ. ದೊರೆಯಲಿದೆ. 
ಈ ಎರಡು ವಿಭಾಗ ಮಾತ್ರವಲ್ಲದೆ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೂ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಪೈಕಿ ಟೂರ್ನಿಯ ಅಮೂಲ್ಯ ಆಟಗಾರ ಪ್ರಶಸ್ತಿ ಪಡೆವ ಆಟಗಾರನಿಗೆ 10 ಲಕ್ಷ ರೂ. ನಗದು, ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಗೆ ಪರ್ಪಲ್ ಕ್ಯಾಪ್ ಗೌರವದೊಂದಿಗೆ 10 ಲಕ್ಷ ಚೆಕ್ ಮತ್ತು ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ಗೌರವದೊಂದಿಗೆ 10 ಲಕ್ಷ ಚೆಕ್ ದೊರೆಯಲಿದೆ.
ಅಂತೆಯೇ ಎಮರ್ಜಿಂಗ್ ಪ್ಲೇಯರ್ ಗೌರವಕ್ಕೆ ಪಾತ್ರರಾಗುವ ಆಟಗಾರನಿಗೆ 10 ಲಕ್ಷ ಚೆಕ್ ಹಾಗೂ ಟ್ರೋಫಿ, ಸೀಸನ್ ನ ಅತ್ಯುತ್ತಮ ಕ್ಯಾಚ್ ಪಡೆದ ಆಟಗಾರನಿಗೆ 10 ಲಕ್ಷ ಚೆಕ್, ಎಫ್ ಬಿಬಿ ಸ್ಟೈಲಿಶ್ ಪ್ಲೇಯರ್ ಗೌರವಕ್ಕೆ ಪಾತ್ರನಾಗುವ ಆಟಗಾರನನ್ನೂ ಟ್ರೋಫಿ ನೀಡಿ ಗೌರವಿಸಲಾಗುತ್ತದೆ. 
ಉತ್ತಮ ಸ್ಟೇಡಿಯಂಗೂ ಪ್ರಶಸ್ತಿ
ಇನ್ನು ಇಷ್ಟು ಮಾತ್ರವಲ್ಲದೇ ಟೂರ್ನಿಗಾಗಿ ಉತ್ತಮ ವೇದಿಕೆ ಅಂದರೆ ಉತ್ತಮ ಸ್ಟೇಡಿಯಂ ನಿರ್ವಹಣೆ ಮಾಡಿದ ಸ್ಟೇಡಿಯಂ ಸಿಬ್ಬಂದಿಗಳನ್ನು ಬಿಸಿಸಿಐ ಗೌರವಿಸಲಿದೆ. ಅದರಂತೆ ಟೂರ್ನಿಯಲ್ಲಿ ಉತ್ತಮ ಸ್ಟೇಡಿಯಂ ಗೌರವಕ್ಕೆ ಪಾತ್ರವಾಗುವ ಕ್ರೀಡಾಂಗಣಕ್ಕೆ 50 ಲಕ್ಷ ಚೆಕ್ ನೀಡಲಾಗುತ್ತದೆ. ಟೂರ್ನಿಯಲ್ಲಿ 7 ಕ್ಕೂ ಅಧಿಕ ಪಂದ್ಯಗಳನ್ನು ಹೋಸ್ಟ್ ಮಾಡಿದ ಕ್ರೀಡಾಂಗಣಕ್ಕೆ ಈ ಪ್ರಶಸ್ತಿ ದೊರೆಯಲಿದೆ. ಅಂತೆಯೇ 7ಕ್ಕೂ ಕಡಿಮೆ ಪಂದ್ಯಗಳನ್ನು ಹೋಸ್ಟ್ ಮಾಡಿರುವ ಉತ್ತಮ ಕ್ರೀಡಾಂಗಣಕ್ಕೆ 25 ಲಕ್ಷ ರೂ ಚೆಕ್ ಹಾಗೂ ಟ್ರೋಫಿ ನೀಡಲಾಗುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT