ಕ್ರಿಕೆಟ್

ಟಿ20, ಏಕದಿನ ಕ್ರಿಕೆಟ್‌ಗಾಗಿ ದೇಶೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಂಬಟ್ಟಿ ರಾಯುಡು!

Vishwanath S
ಹೈದರಾಬಾದ್: ಟೀಂ ಇಂಡಿಯಾ ಆಟಗಾರ ಅಂಬಟ್ಟಿ ರಾಯುಡು ಅಂತಾರಾಷ್ಟ್ರೀಯ ಟಿ20 ಹಾಗೂ ಏಕದಿನ ಕ್ರಿಕೆಟ್‌ಗೋಸ್ಕರ ದೇಶೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 
ಏಕದಿನ ಮತ್ತು ಟಿ20 ಕ್ರಿಕೆಟ್ ಕಡೆ ಹೆಚ್ಚು ಗಮನ ಹರಿಸುವ ಸಲುವಾಗಿ ಅಂಬಟ್ಟಿ ರಾಯುಡು ಇಂಥದ್ದೊಂದು ದೃಢ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. 
33 ವರ್ಷದ ಅಂಬಟ್ಟಿ ರಾಯುಡು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಟಿ20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಉಜ್ವಲ ಪ್ರತಿಭೆ ಎಂದು ಪ್ರತಿಯೊಬ್ಬರು ಅವರ ಬೆನ್ನುತಟ್ಟುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮೆಲ್ಲಾ ಗಮನವನ್ನೂ ಟಿ20 ಮತ್ತು ಏಕದಿನ ಕ್ರಿಕೆಟ್ ನ ಆವೃತ್ತಿಗಳ ಕಡೆ ಹರಿಸಲು ಮುಂದಾಗಿದ್ದಾರೆ.
SCROLL FOR NEXT