ಹರ್ಭಜನ್ ಸಿಂಗ್-ಆ್ಯಂಡ್ರೂ ಸೈಮಂಡ್ಸ್ 
ಕ್ರಿಕೆಟ್

ನನ್ನ ಜೀವನವೇ ಹಾಳಾಯಿತು: ಹರ್ಭಜನ್ ಸಿಂಗ್ ಜನಾಂಗೀಯ ನಿಂದನೆ ಕುರಿತು ಸೈಮಂಡ್ಸ್ ಹೇಳಿದ್ದೇನು?

ಟೀಂ ಇಂಡಿಯಾದ ಕ್ರಿಕೆಟಿಗ ಹರ್ಭಜನ್ ಸಿಂಗ್ ವಿರುದ್ಧ ಜನಾಂಗೀಯ ನಿಂದನೆ ಮಾಡಿ ಟೀಕೆಗೆ ಗುರಿಯಾಗಿದ್ದ ಆಸ್ಟ್ರೇಲಿಯಾ ಮಾಜಿ ಆಟಗಾರ ಆಂಡ್ರ್ಯೂ ಸೈಮಂಡ್ಸ್ ಪ್ರಕರಣ ಕುರಿತಂತೆ ಮಾತನಾಡಿದ್ದಾರೆ...

ಮುಂಬೈ: ಟೀಂ ಇಂಡಿಯಾದ ಕ್ರಿಕೆಟಿಗ ಹರ್ಭಜನ್ ಸಿಂಗ್ ವಿರುದ್ಧ ಜನಾಂಗೀಯ ನಿಂದನೆ ಮಾಡಿ ಟೀಕೆಗೆ ಗುರಿಯಾಗಿದ್ದ ಆಸ್ಟ್ರೇಲಿಯಾ ಮಾಜಿ ಆಟಗಾರ ಆಂಡ್ರ್ಯೂ ಸೈಮಂಡ್ಸ್ ಪ್ರಕರಣ ಕುರಿತಂತೆ ಮಾತನಾಡಿದ್ದಾರೆ. 
2008ರ ಸಿಡ್ನಿ ಟೆಸ್ಟ್ ಪಂದ್ಯವೊಂದರಲ್ಲಿ ಆಂಡ್ರ್ಯೂ ಸೈಮಂಡ್ಸ್ ರನ್ನು ಹರ್ಭಜನ್ ಸಿಂಗ್ ಮಂಕಿ ಎಂದು ಕರೆದಿದ್ದರು. ಇದಕ್ಕೆ ಭಜ್ಜಿ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದ ಸೈಮಂಡ್ಸ್ ಅವರಿಗೆ ಮೂರು ಪಂದ್ಯಗಳ ನಿಷೇಧ ಹೇರಲಾಗಿತ್ತು. 
ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ ಸೈಮಂಡ್ಸ್ ಅವರು ಹರ್ಭಜನ್ ಸಿಂಗ್ ರನ್ನು ನಿಂದಿಸಿದ ಬಳಿಕ ನನ್ನ ಜೀವನ ಮೂರಾಬಟ್ಟೆಯಾಯಿತು ಎಂದು ಹೇಳಿದ್ದಾರೆ. ಆ ಘಟನೆ ಬಳಿಕ ನಾನು ಕುಡಿತದ ದಾಸನಾದೆ. ನನ್ನ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು. ನನ್ನ ವೈಯಕ್ತಿಕ ಹಾಗೂ ವೃತ್ತಿ ಬದುಕು ಹಾಳಾಯಿತು ಎಂದು ಹೇಳಿದ್ದಾರೆ. 
ಇದಾದ ನಂತರ ನಾನು ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದೆ. ಆ ತಂಡದಲ್ಲಿ ಆಡುತ್ತಿದ್ದ ಹರ್ಭಜನ್ ಸಿಂಗ್ ಅವರು ನನ್ನ ಬಳಿ ಬಂದು ಕ್ಷಮೆ ಯಾಚಿಸಿದ್ದರು ಎಂದು ಸೈಮಂಡ್ಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!