'ದೇಶ ಬಿಟ್ಟು ತೋಲಗಿ': ತನ್ನನ್ನು ಟ್ರೋಲ್ ಮಾಡಿದವರಿಗೆ ವಿರಾಟ್ ಕೊಹ್ಲಿ ಕೊಟ್ಟ ಪ್ರತ್ಯುತ್ತರ ಏನು ಗೊತ್ತ?
ನನಗೆ ಭಾರತೀಯ ಬ್ಯಾಟ್ಸ್ಮನ್ಗಳಿಗಿಂತ ಇಂಗ್ಲೆಂಡ್, ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ಇಷ್ಟವಾಗುತ್ತಾರೆ ಎಂದು ಹೇಳಿದ್ದ ಅಭಿಮಾನಿಗೆ ನೀವು ಭಾರತದಲ್ಲಿ ಇರಬೇಡಿ...
ನವದೆಹಲಿ: ನನಗೆ ಭಾರತೀಯ ಬ್ಯಾಟ್ಸ್ಮನ್ಗಳಿಗಿಂತ ಇಂಗ್ಲೆಂಡ್, ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಇಷ್ಟವಾಗುತ್ತಾರೆ ಎಂದು ಹೇಳಿದ್ದ ಅಭಿಮಾನಿಗೆ ನೀವು ಭಾರತದಲ್ಲಿ ಇರಬೇಡಿ, ದೇಶ ಬಿಟ್ಟು ಹೋಗಿ ಎಂದು ಹೇಳಿ ಟ್ರೋಲ್ಗೆ ಗುರಿಯಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ತನ್ನನ್ನು ಟ್ರೋಲ್ ಮಾಡಿದವರಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಟ್ವೀಟರ್ ನಲ್ಲಿ ನೀವು ಟ್ರೋಲ್ ಮಾಡುತ್ತಿರುವುದು ನನ್ನಲ್ಲ ಎಂಬುದು ನನ್ನ ಊಹೆ. ನಾನು ಟ್ರೋಲ್ ಗೆ ಅಂಟಿಕೊಂಡಿರುವವನು. ಕೆಲ ಭಾರತೀಯರು ಹೇಗೆಲ್ಲಾ ಕಮೆಂಟ್ ಮಾತನಾಡುತ್ತಾರೆ ಎಂಬುದನ್ನು ಮಾತ್ರ ನಾನು ತೋರಿಸಿದೆ. ನನಗೆ ನನ್ನದೇಯಾದ ನಿಲುವುಗಳಿವೆ. ಅದಕ್ಕೋಸ್ಕರ ನಾನು ಈ ರೀತಿ ಮಾತನಾಡಿದೆ. ದೀಪಾವಳಿ ಸಂಭ್ರಮ ದೇಶದೆಲ್ಲದೆ ಮನೆ ಮಾಡಿದೆ. ಹಬ್ಬವನ್ನು ಆನಂದಿಸಿ. ಎಲ್ಲರಿಗೂ ಪ್ರೀತಿ ಮತ್ತು ಶಾಂತಿ ಎಂದು ಟ್ವೀಟಿಸಿದ್ದಾರೆ.
I guess trolling isn't for me guys, I'll stick to getting trolled!