ಶೊಯೆಬ್ ಮಲ್ಲಿಕ್ ವಿಕೆಟ್ ಒಪ್ಪಿಸಿದ ರೀತಿ 
ಕ್ರಿಕೆಟ್

ಅಪರೂಪದ ಘಟನೆ: ವಿಚಿತ್ರವಾಗಿ ಔಟ್ ಆದ ಶೊಯೆಬ್ ಮಲಿಕ್!

ಕ್ರಿಕೆಟ್ ನಲ್ಲಿ ಸಾಕಷ್ಟು ಬಾರಿ ಬ್ಯಾಟ್ಸಮನ್ ಗಳು ಹೀಗೂ ಔಟ್ ಆಗಬಹುದಾ ಎಂಬಂತೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ಈ ಪಟ್ಟಿಗೆ ಇದೀಗ ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಕೂಡ ಸೇರಿದ್ದಾರೆ.

ಅಬುದಾಬಿ: ಕ್ರಿಕೆಟ್ ನಲ್ಲಿ ಸಾಕಷ್ಟು ಬಾರಿ ಬ್ಯಾಟ್ಸಮನ್ ಗಳು ಹೀಗೂ ಔಟ್ ಆಗಬಹುದಾ ಎಂಬಂತೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ಈ ಪಟ್ಟಿಗೆ ಇದೀಗ ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಕೂಡ ಸೇರಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಅಜರ್ ಅಲಿ ಬೌಂಡರಿ ಬಾರಿಸಿದ್ದೇನೆ ಎಂದು ಅಚ್ಚರಿ ರೀತಿಯಲ್ಲಿ ರನೌಟ್ ಆಗಿದ್ದರು. ಇಂತಹುದೇ ಘಟನೆ ಇದೀಗ ಮತ್ತೆ ನಡೆದಿದ್ದು, ಪಾಕ್ ಬ್ಯಾಟ್ಸಮನ್ ಶೊಯೆಬ್ ಮಲ್ಲಿಕ್ ವಿಚಿತ್ರವಾಗಿ ಔಟ್ ಆಗಿದ್ದಾರೆ. ಈ ವಿಚಿತ್ರ ಸನ್ನಿವೇಷಕ್ಕೆ ಪಾಕಿಸ್ತಾನ-ನ್ಯೂಜಿಲೆಂಡ್ ನಡುವಿನ 2ನೇ ಪಂದ್ಯ ಸಾಕ್ಷಿಯಾಗಿದ್ದು, ಪಾಕಿಸ್ತಾನ ತಂಡದ ಅನುಭವಿ ಬ್ಯಾಟ್ಸಮನ್ ಶೋಯೆಬ್ ಮಲಿಕ್ ವಿಚಿತ್ರವಾಗಿ ವಿಕೆಟ್ ಒಪ್ಪಿಸಿದ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
ಪಂದ್ಯದ 33ನೇ ಓವರ್ ಬೌಲಿಂಗ್ ಮಾಡುತ್ತಿದ್ದ ನ್ಯೂಜಿಲೆಂಡ್’ನ ವೇಗಿ ಲ್ಯೂಕ್ ಫರ್ಗ್ಯುಸನ್ ಪಾಕ್ ಕ್ರಿಕೆಟಗ ಶೋಯೆಬ್ ಮಲಿಕ್ ಅವರನ್ನು ಬಲಿ ಪಡೆದಿದ್ದು ಚರ್ಚೆಗೆ ಗ್ರಾಸವಾಗಿದೆ. 33ನೇ ಓವರ್’ನ 4ನೇ ಎಸೆತದಲ್ಲಿ ಮಲಿಕ್ ಚೆಂಡನ್ನು ಫುಲ್ ಶಾಟ್ ಆಗಿ ಬಾರಿಸಿದಾಗ ಚೆಂಡು ಸಿಲ್ಲಿ ಮಿಡ್’ಆನ್’ನಲ್ಲಿ ನಿಂತಿದ್ದ ಹೆನ್ರಿ ನಿಕೋಲಸ್ ಭುಜಕ್ಕೆ ತಾಗಿ ಮೇಲೆದ್ದ ಚೆಂಡನ್ನು ಇಶ್ ಸೋಧಿ ಸುಲಭ ಕ್ಯಾಚ್ ಪಡೆಯುವಲ್ಲಿ ಸಫಲರಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್’ಗಳಲ್ಲಿ 9 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದ್ದು, ಭಾನುವಾರ ಅಂತಿಮ ಪಂದ್ಯ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?