ಪ್ರೊವಿಡೆನ್ಸ್: ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಭಾರತ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು.
ಗೆಲುವಿಗೆ ಪಾಕಿಸ್ತಾನ ನೀಡಿದ 134 ರನ್ ಗಳ ಗುರಿ ಬೆನ್ನತ್ತಿದ ಭಾರತ, ಮಿಥಾಲಿ ರಾಜ್(56) ಅವರ ಭರ್ಜರಿ ಅರ್ಧ ಶತಕದ ನೆರವಿನಿಂದ 19 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 137 ರನ್ ದಾಖಲಿಸುವ ಮೂಲಕ ಗೆಲುವು ದಾಖಲಿಸಿತು.
ಭಾರತದ ಪರ ಮಿಥಿಲಿ ರಾಜ್ 56, ಸ್ಮೃತಿ ಮಂದಾನ 26, ಜಮ್ಮಿಮ ರೋಡ್ರಿಗಸ್ 16 ಹಾಗೂ ಹರ್ಮನ್ ಪ್ರೀತ್ ಕೌರ್ 14* ರನ್ ಗಳಿಸಿದರು.
ಪಾಕಿಸ್ತಾನದ ಪರ ಬಿಸ್ಮಾ ಮರೂಫ್53, ನಿದಾ ದಾರ್52 ಹಾಗೂ ಜವೇರಿಯಾ ಖಾನ್ 17 ರನ್ ಗಳಿಸಿದ್ದರು.
ಭಾರತದ ಪರವಾಗಿ ಪೂನಮ್ ಯಾದವ್, ದಯಾಲನ್ ಹೇಮಲತಾ ತಲಾ 2 ವಿಕೆಟ್ ಪಡೆದರು. ಅರುಂಧತಿ ರೆಡ್ಡಿ 1 ವಿಕೆಟ್ ಪಡೆದರು.