ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಹಂತಕ್ಕೆ ಬಂದು ತಲುಪಿದೆ. ಇನ್ನೇನು ನಾಲ್ಕು ತಂಡಗಳು ಅಂತಿಮವಾಗಿ ಸ್ಪರ್ಧಿಸಿ ಫೈನಲ್ ಪ್ರವೇಶಿಸುವ ತವಕದಲ್ಲಿವೆ.
ಇನ್ನು ಭಾನುವಾರ ರಾತ್ರಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ನಲ್ಲಿ ಯಾವ ತಂಡಗಳು ಮುಖಾಮುಖಿಯಾಗಲಿದೆ ಎಂದು ಟ್ವೀಟಿಸಿತ್ತು.
ಐಸಿಸಿಯ ಟ್ವೀಟ್ ನಲ್ಲಿ ತಮ್ಮ ತಂಡದ ಹೆಸರನ್ನು ಕಾಣದೆ ಆಕ್ರೋಶಗೊಂಡ ಪಾಕಿಸ್ತಾನದ ಅಭಿಮಾನಿಗಳು ಐಸಿಸಿ ವಿರುದ್ಧ ತಿರುಗಿಬಿದ್ದಿದ್ದರು. ಟಿ20 ಕ್ರಿಕೆಟ್ ನಲ್ಲಿ ಪಾಕಿಸ್ತಾನ ಪುರುಷರ ತಂಡ ಅಗ್ರಸ್ಥಾನದಲ್ಲಿದೆ. ಅಂತಹದರಲ್ಲಿ ಪಾಕ್ ತಂಡವನ್ನೇ ನೀವು ಕೈಬಿಟ್ಟಿರುವುದು ಸರಿಯಲ್ಲ ಎಂದು ರೀಟ್ವೀಟ್ ಗಳನ್ನು ಮಾಡಿದ್ದರು.
ಅಸಲಿಗೆ ವಿಷಯವೆನೆಂದರೇ ಪ್ರಸ್ತುತ ಟಿ20 ವಿಶ್ವಕಪ್ ನಡೆಯುತ್ತಿರುವುದು ಮಹಿಳೆಯರದ್ದು, ಪುರುಷರದಲ್ಲ. ಆದರೆ ಪಾಕ್ ಅಭಿಮಾನಿಗಳು ಮಾತ್ರ ಇದು ಪುರುಷರ ವಿಶ್ವಕಪ್ ಎಂದು ಭಾವಿಸಿ ಐಸಿಸಿಯನ್ನು ಟ್ರೋಲ್ ಮಾಡಿ ಕೊನೆಗೆ ಅವರೇ ಮುರ್ಖರಾಗಿದ್ದಾರೆ.
ಇನ್ನು ಐಸಿಸಿ ಮಹಿಳಾ ಟಿ20 ಫೈನಲ್ ನಲ್ಲಿ ಯಾವ ತಂಡಗಳು ಆಡಲಿದೆ ಎಂಬ ಟ್ವೀಟ್ ಗೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಟೀಂ ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್ ಗೆ ಶೇಖಡ 47ರಷ್ಟು ಹಾಗೂ ವೆಸ್ಟ್ ಇಂಡೀಸ್ ವರ್ಸಸ್ ಇಂಗ್ಲೆಂಡ್ ಗೆ ಶೇಖಡ 6ರಷ್ಟು, ಆಸ್ಟ್ರೇಲಿಯಾ ವರ್ಸಸ್ ಟೀಂ ಇಂಡಿಯಾಗೆ ಶೇಖಡ 40ರಷ್ಟು ಹಾಗೂ ಆಸ್ಟ್ರೇಲಿಯಾ ವರ್ಸಸ್ ಇಂಗ್ಲೆಂಡ್ ಗೆ ಶೇಕಡ 7ರಷ್ಟು ಅಭಿಮತ ಬಂದಿದೆ.