ಕೇಪ್ ಟೌನ್: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಸಿಡಿಸಿರುವ ಸ್ವಿಚ್ ಹಿಟ್ ಸೂಪರ್ ಸಿಕ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಎಬಿ ಡಿವಿಲಿಯರ್ಸ್ ಸದ್ಯ ಮಜಾನ್ಸಿ ಸೂಪರ್ ಲೀಗ್(ಎಂಎಸ್ಎಲ್)ನಲ್ಲಿ ಆಡುತ್ತಿದ್ದಾರೆ. ಇನ್ನು ವಿದಾಯದ ಬಳಿಕ ಮೊದಲ ಟಿ20 ಲೀಗ್ ಪಂದ್ಯದಲ್ಲೇ ಸ್ಫೋಟಕ ಬ್ಯಾಟಿಂಗ್ ಮಾಡಿ ಅರ್ಧ ಶತಕ ಸಿಡಿಸಿದ್ದಾರೆ.
ಸದ್ಯ ಎಬಿ ಡಿವಿಲಿಯರ್ಸ್ ಸಿಡಿಸಿರುವ ಸ್ವಿಚ್ ಹಿಟ್ ಸಿಕ್ಸ್ ಎಲ್ಲರ ಗಮನ ಸೆಳೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಜಾರ್ಜ್ ಲಿಂಡೆ ಓವರ್ ನ 4ನೇ ಎಸೆತದಲ್ಲಿ ಎಬಿಡಿ ಈ ಸಿಕ್ಸ್ ಸಿಡಿಸಿದ್ದಾರೆ.