ಕ್ರಿಕೆಟ್

ರಿಷಬ್ ಪಂತ್ 'ಗೋಲ್ಡನ್ ಡಕೌಟ್': ಕಡಿಮೆ ಪಂದ್ಯದಲ್ಲೇ ಕಳಪೆ ಸಾಧನೆ, ಕೋಚ್ ರವಿಶಾಸ್ತ್ರಿ ಕಾಲೆಳೆದ ನೆಟಿಗರು!

Vishwanath S
ಟೀಂ ಇಂಡಿಯಾದಲ್ಲಿ ಯುವಕರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗುತ್ತಿದೆ. ಪರಿಣಾಮ ಐಪಿಎಲ್ ನಲ್ಲಿ ಮಿಂಚಿದ್ದ ರಿಷಬ್ ಪಂತ್ ಇದೀಗ ತಂಡದಲ್ಲಿ ಆಡುವ ಸ್ಥಾನ ಪಡೆದಿದ್ದು ಕಡಿಮೆ ಪಂದ್ಯದಲ್ಲೇ ಗೊಲ್ಡನ್ ಡಕೌಟ್ ಆಗುವ ಮೂಲಕ ಕಳಪೆ ಸಾಧನೆ ಮಾಡಿದ್ದಾರೆ. 
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ್ದಾಗ ಮೈದಾನಕ್ಕೆ ಬಂದ ರಿಷಬ್ ಪಂತ್ ತಾಳ್ಮೆಯ ಆಟವಾಡಬೇಕಿತ್ತು. ಆದರೆ ಮೊದಲ ಪಂದ್ಯದಲ್ಲೇ ಔಟ್ ಆಗಿ ನಿರಾಸೆ ಮೂಡಿಸಿದರು. ಇನ್ನು ಸ್ಫೋಟಕ ಬ್ಯಾಟಿಂಗ್ ಗೆ ಹೆಸರಾದ ಪಂತ್ ವಿರುದ್ಧ ಇದೀಗ ನೆಗಿಟರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ತಾಳ್ಮೆಯ ಆಟವಾಡಿ ಅರ್ಧ ಶತಕ ಸಿಡಿಸಿ ಪಂದ್ಯ ಗೆಲುವಿಗೆ ಕಾರಣರಾದರು. ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ಪಂದ್ಯಗಳನ್ನು ಗೆಲ್ಲಲು ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದರು. 
ಇನ್ನು ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಅವರು ರಿಷಬ್ ಪಂತ್ ಅವರನ್ನು ಎಂಎಸ್ ಧೋನಿಗೆ ಪರ್ಯಾಯ ವಿಕೆಟ್ ಕೀಪರ್ ಆಗಿ ಬಿಂಬಿಸುತ್ತಿದ್ದಾರೆ. ಆದರೆ ಪಂತ್ ಕಳಪೆ ಪ್ರದರ್ಶನ ನೀಡುತ್ತಿದ್ದರು. ಅವರಿಗೆ ರವಿಶಾಸ್ತ್ರಿ ಹೆಚ್ಚು ಅವಕಾಶಗಳನ್ನು ನೀಡುತ್ತಿರುವುದು ಶೋಚನಿಯ ಎಂದು ನೆಟಿಗರು ರವಿಶಾಸ್ತ್ರಿ ವಿರುದ್ದ ತಿರುಗಿಬಿದ್ದಿದ್ದಾರೆ. 
SCROLL FOR NEXT