ಪಣಜಿ: ಕೇಂದ್ರ ಸರ್ಕಾರ ಅಂಧ ಕ್ರಿಕೆಟಿಗರನ್ನು ಗುರುತಿಸದಿರುವುದು ವಿಷಾದಕರ ಮತ್ತು ಈ ಬಗ್ಗೆ ಅಂಧ ಆಟಗಾರರಿಗೆ ತುಂಬಾ ಬೇಸರ ಇದೆ ಎಂದು ಅಂಧ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಜಿ ಕೆ ಅವರು ಹೇಳಿದ್ದಾರೆ.
ಗೋವಾದಲ್ಲಿ ಭಾರತ, ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಿನ ತ್ರಿಕೋನ ಸರಣಿ ಉದ್ಘಾಟನೆ ವೇಳೆ ಮಾತನಾಡಿದ ಮಹಾಂತೇಶ್ ಅವರು, ಸರ್ಕಾರ ನಗದು ಬಹುಮಾನ ಮತ್ತು ಅನುದಾನ ವಿಚಾರದಲ್ಲಿ ನಮಗೆ ಬೆಂಬಲ ನೀಡುತ್ತಿದೆ. ಆದರೆ ನಮ್ಮನ್ನು ಗುರುತಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇತರೆ ಕ್ರೀಡಾಪಟುಗಳಿಗೆ ಸಿಗುತ್ತಿರುವ ಸೌಲಭ್ಯ, ಪ್ರಶಸ್ತಿ, ನಗದು ಸೇರಿದಂತೆ ಇತರೆ ಹಲವು ಸೌಲಭ್ಯಗಳು ನಮ್ಮ ಅಂಧ ಕ್ರಿಕೆಟಿಗರಿಗೆ ಸಿಗುತ್ತಿಲ್ಲ. ಆದರೆ ನಮಗೂ ಸೂಕ್ತ ಮಾನ್ಯತೆ ನೀಡಿ. ಹಾಗ ಇತರೆ ಕ್ರೀಡಾಪಟುಗಳಿಗೆ ಸಿಗುವ ಸೌಲಭ್ಯ ಅಂಧ ಕ್ರಿಕೆಟಿಗರಿಗೂ ಸಿಗುತ್ತದೆ ಎಂದು ಸರ್ಕಾರಕ್ಕೆ ತಾವು ಮನವಿ ಮಾಡುವುದಾಗಿ ಮಹಾಂತೇಶ್ ತಿಳಿಸಿದ್ದಾರೆ.