ರಿಷಬ್‌ ಪಂತ್ 
ಕ್ರಿಕೆಟ್

ವೆಸ್ಟ್‌ ಇಂಡೀಸ್ ವಿರುದ್ಧ ಕೊನೆ ಟೆಸ್ಟ್: 2ನೇ ದಿನದಾಟದಂತ್ಯಕ್ಕೆ ಭಾರತ 308/4

ವೆಸ್ಟ್‌ ಇಂಡೀಸ್ ವಿರುದ್ಧದ ಎರಡನೇ ಹಾಗೂ ಕೊನೆಯ ಟೆಸ್ಟ್ ನ ಎರಡನೇ ದಿನದಾಟದಂತ್ಯಕ್ಕೆ ಭಾರತ ನಾಲ್ಕು ವಿಕೆಟ್‌...

ಹೈದರಾಬಾದ್: ವೆಸ್ಟ್‌ ಇಂಡೀಸ್ ವಿರುದ್ಧದ ಎರಡನೇ ಹಾಗೂ ಕೊನೆಯ ಟೆಸ್ಟ್ ನ ಎರಡನೇ ದಿನದಾಟದಂತ್ಯಕ್ಕೆ ಭಾರತ ನಾಲ್ಕು ವಿಕೆಟ್‌ ಕಳೆದುಕೊಂಡು 308 ರನ್‌ ಸೇರಿಸಿದೆ.
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್‌ಇಂಡೀಸ್ 311ಕ್ಕೆ ಆಲೌಟ್ ಆಗಿದೆ.
ವೆಸ್ಟ್‌ಇಂಡೀಸ್ ನೀಡಿದ 311 ರನ್ ಗಳ ಗುರಿ ಬೆನ್ನತ್ತಿದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 308ರನ್ ಗಳಿಸಿದೆ. ಸದ್ಯ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಅಜಿಂಕ್ಯಾ ರಹಾನೆ 75 ಹಾಗೂ ರಿಷಬ್‌ ಪಂತ್ 85 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ. 
ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಅವರು ಕೇವಲ ನಾಲ್ಕು ರನ್‌ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ತಂಡಕ್ಕೆ ಆಸರೆಯಾಗಿದ್ದ ಪೃಥ್ವಿ ಶಾ 53 ಎಸೆತಗಳಲ್ಲಿ ಭರ್ಜರಿ 70 ಗಳಿಸಿ, ಜೊಮೆಲ್ ವ್ಯಾರಿಕನ್ ಬೌಲಿಂಗ್‌ನಲ್ಲಿ ಶಿಮ್ರನ್ ಹೇಟ್ಮಯರ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ಮರಳಿದರು. ಇದರ ಬೆನ್ನಲ್ಲೆ, ಚೇತೇಶ್ವರ್ ಪೂಜಾರ ಗೇಬ್ರಿಯಲ್ ಎಸೆತದಲ್ಲಿ ಹ್ಯಾಮಿಲ್ಟನ್‌ಗೆ ಕ್ಯಾಚಿತ್ತು ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು.
ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ  7 ವಿಕೆಟ್ ನಷ್ಟಕ್ಕೆ  295 ರನ್ ಗಳಿಸಿದ ವೆಸ್ಟ್ ಇಂಡೀಸ್ ಇಂದು 311 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
ವೆಸ್ಟ್ ಇಂಡೀಸ್ ಪರ ಶತಕಗಳಿಸಿದ ರೊಸ್ಟನ್ ಚೆಸ್,  ಶಾಹಿ ಹೋಪ್  ವಿಕೆಟ್ ಗಳನ್ನು   ಉಮೇಶ್ ಯಾದವ್ ಪಡೆದರೆ,  ಅಶ್ವಿನ್ ಬೌಲಿಂಗ್ ನಲ್ಲಿ  ರವಿಂದ್ರ ಜಡೇಜಾಗೆ ಕಿರನ್ ಪೊವೆಲ್ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನೂ ಕುಲದೀಪ್ ಯಾದವ್  ಶಿಮ್ರಾನ್ ಹೆಟ್ ಮೈರ್,  ಕೆ.ಬ್ರಾಥ್ ವೈಟ್ ಅವರನ್ನು ಎಲ್ ಬಿ ಡಬ್ಲ್ಯೂ ಬಲೆಗೆ ಕೆಡವಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT