ಬೆಂಗಳೂರು: ಸಿನಿಮಾ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳ ಘಟಾನುಘಟಿಗಳಿಗೆ ನಡುಕ ಉಂಟು ಮಾಡಿರುವ #MeToo ಅಭಿಯಾನ ಇದೀಗ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಗೂ ಬಿಸಿ ಮುಟ್ಟಿಸಿದ್ದು, ಭಾರತೀಯ ಕ್ರಿಕೆಂಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಸಿಇಒ ರಾಹುಲ್ ಜೋಹ್ರಿ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.
ಪತ್ರಕರ್ತೆ ಹಾಗೂ ಲೇಖಕಿ ಹರ್ನಿದ್ ಕೌರ್ ಅವರು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಜೋಹ್ರಿ ಅವರು ಮಾಡಿದ್ದಾರೆ ಎನ್ನಲಾದ ಕೆಲವು ಇಮೇಲ್ ಗಳ ಸ್ಕೀನ್ ಶಾಟ್ ಗಳನ್ನು ಟ್ಲೀಟ್ ಮಾಡಿರುವ ಕೌರ್, ರಾಹುಲ್ ಜೋಹ್ರಿ ಈಗ ನಿಮ್ಮ ಸರದಿ ಎಂದು ಕುಟುಕಿದ್ದಾರೆ.
ಲಭ್ಯವಿರುವ ಸ್ಕೀನ್ ಶಾಟ್ ಗಳ ಪ್ರಕಾರ, ರಾಹುಲ್ ಜೋಹ್ರಿ ಅವರು ಸಂತ್ರಸ್ತರಿಗೆ ಉದ್ಯೋಗ ಕೊಡಿಸುವ ಆಮಿಷ ಒಡಿದ್ದಾರೆ ಎನ್ನಲಾಗಿದೆ.
ಈ ಮುಂಚೆ ಶ್ರೀಲಂಕಾ ಕ್ರಿಕೆಟಿಗರಾದ ಅರ್ಜುನ್ ರಣತುಂಗ ಹಾಗೂ ಲಸಿತ್ ಮಾಲಿಂಗ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದವು.