ಕ್ರಿಕೆಟ್

ಬೌಲರ್‌ಗಳ ಮಾರಕ ದಾಳಿಗೆ ವಿಂಡೀಸ್ ಪುಡಿ ಪುಡಿ: 2ನೇ ಟೆಸ್ಟ್ ಗೆಲುವಿನ ಸನಿಹದಲ್ಲಿ ಟೀಂ ಇಂಡಿಯಾ!

Vishwanath S
ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವು ನಿಶ್ಚಿಯವಾಗಿದೆ. ವೆಸ್ಟ್ ಇಂಡೀಸ್ ಭಾರತಕ್ಕೆ 72 ರನ್ ಗಳ ಗುರಿ ನೀಡಿದೆ.
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ 56 ರನ್ ಗಳೊಂದಿಗೆ ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್ ತಂಡವನ್ನು ಭಾರತದ ಬೌಲರ್ ಗಳ ಮಾರಕ ಬೌಲಿಂಗ್ ದಾಳಿಯಿಂದಾಗಿ 127 ರನ್ ಗಳಿಗೆ ಕಟ್ಟಿಹಾಕಲಾಯಿತು.
ಎರಡನೇ ದಿನ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 308 ಗಳಿಸಿದ ಟೀಂ ಇಂಡಿಯಾ ಮೂರನೇ ದಿನದಾಟದಂದೂ ಉಳಿದ ವಿಕೆಟ್ ಗಳನ್ನು ಕಳೆದುಕೊಂಡು 59 ರನ್ ಗಳಿಸುವ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ ಒಟ್ಟಾರೇ 367 ರನ್ ಪಡೆದುಕೊಂಡಿತು.
ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಹಾಗೂ ಅಜಿಂಕ್ಯಾ ರಹಾನೆ ಅವರ ಮುರಿಯದ ಜೊತೆಯಾಟದಿಂದ 146 ರನ್  ಹರಿದುಬಂದಿತ್ತು. ರಿಷಬ್ ಪಂತ್ 92 ಹಾಗೂ ರಹಾನೆ 80 ರನ್ ಗಳಿಸಿ ಫೆವಿಲಿಯನ್ ಗೆ ನಿರ್ಗಮಿಸಿದರು.
ಕಳೆದ ಪಂದ್ಯದಲ್ಲಿ ಕೆರಿಬಿಯನ್ನರ ವಿರುದ್ಧ  ಚೊಚ್ಚಲ ಶತಕ ದಾಖಲಿಸಿದ್ದ ಅಲ್ ರೌಂಡರ್  ರವೀಂದ್ರ  ಜಡೇಜಾ, ಈ ಪಂದ್ಯದಲ್ಲಿ ಡೆಕ್ ಜೌಟ್ ಆಗುವ ಮೂಲಕ  ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದ್ದರು.  ಸ್ಪಿನ್ನರ್ ಆರ್. ಅಶ್ವಿನ್ 35 ರನ್ ಗಳಿಸುವ ಮೂಲಕ ಟೀಂ ಇಂಡಿಯಾ 350ರ ಗಡಿ ದಾಟಲು  ನೆರವಾಯಿತು.
ವೆಸ್ಟ್ ಇಂಡೀಸ್ ಪರ ಹೌಲ್  ಐದು ಹಾಗೂ ವೇಗಿ ಶಾನನ್ ಗ್ಯಾಬ್ರೀಲ್  ಮೂರು ವಿಕೆಟ್ ಗಳನ್ನು ಪಡೆದುಕೊಂಡರು.
ವೆಸ್ಟ್ ಇಂಡೀಸ್ ವಿರುದ್ಧದ  ಸರಣಿಯಲ್ಲಿ ಭಾರತ ಪ್ರಸ್ತುತ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಒಂದು ವೇಳೆ ಈ ಪಂದ್ಯವನ್ನು ಗೆದ್ದರೆ,  2013 ರಿಂದ  ಸ್ವದೇಶದಲ್ಲಿ ಸತತ 10 ಸರಣಿ ಗೆದ್ದ ಖ್ಯಾತಿ ಪಡೆಯಲಿದೆ.
SCROLL FOR NEXT