ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಉಪನಾಯಕ ಅಂಜಿಕ್ಯ ರಹಾನೆ ಸೂಪರ್ ಕ್ಯಾಚ್ ಹಿಡಿದಿದ್ದು ಇದನ್ನು ಕಂಡ ವಿಂಡೀಸ್ ಬ್ಯಾಟ್ಸ್‌ಮನ್ ಬೆಪ್ಪಾಗಿ ನಿಂತಿದ್ದಾರೆ.
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಎಸೆತದಲ್ಲಿ ವಿಂಡೀಸ್ ತಂಡದ ಆಟಗಾರ ಪೊವೆಲ್ ಸ್ನಿಕ್ ಮಾಡಿದರು. ಈ ವೇಳೆ ಫಸ್ಟ್ ಸ್ಲಿಪ್ ನಲ್ಲಿದ್ದ ಅಜಿಂಕ್ಯ ರಹಾನೆ ಇನ್ನೇನು ನೆಲಕ್ಕೆ ಚೆಂಡು ತಾಗಬೇಕು ಅಷ್ಟರಲ್ಲೇ ಡೈವ್ ಮಾಡಿ ಕ್ಯಾಚ್ ಹಿಡಿದಿದ್ದಾರೆ.
ಇದನ್ನು ಪೊವೆಲ್ ಚೆಂಡು ನೆಲಕ್ಕೆ ತಾಗಿರಬಹುದು ಎಂಬ ಶಂಕೆಯಿಂದ ಅಲ್ಲೇ ನಿಂತಿದ್ದರು. ಆಗ ಅಂಪೈರ್ ಗಳು ಚರ್ಚಿಸಿ ಮೂರನೇ ಅಂಪೈರ್ ಗೆ ಮನವಿ ಸಲ್ಲಿಸಿದರು. ಮತ್ತೆ ವಿಡಿಯೋವನ್ನು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇದರಿಂದ ಬೆಪ್ಪಾದ ಪೊವೆಲ್ ಸ್ವಲ್ಪ ಒತ್ತು ಅಲ್ಲೇ ನಿಂತು ನಂತರ ಬೇಸರದಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.