ಸಂಗ್ರಹ ಚಿತ್ರ 
ಕ್ರಿಕೆಟ್

ಬಿಡುಗಡೆಗೊಳಿಸಿರುವ ಆಟಗಾರರ ಪಟ್ಟಿ ನೀಡಿ: ಐಪಿಎಲ್ ತಂಡಗಳಿಗೆ ಸಂಕಷ್ಟ ತಂದಿಟ್ಟ ಬಿಸಿಸಿಐ ವಾರ್ನಿಂಗ್

ಮುಂದಿನ ಐಪಿಎಲ್ ಟೂರ್ನಿಗೆ ಸಿದ್ದತೆ ನಡೆಸಿಕೊಂಡಿರುವ ಫ್ರಾಂಚೈಸಿ ತಂಡಗಳಿಗೆ ಬಿಸಿಸಿಐ ನೀಡಿರುವ ವಾರ್ನಿಂಗ್ ಹೊಸದೊಂದು ಸಂಕಷ್ಟ ತಂದಿಟ್ಟಿದೆ.

ಮುಂಬೈ: ಮುಂದಿನ ಐಪಿಎಲ್ ಟೂರ್ನಿಗೆ ಸಿದ್ದತೆ ನಡೆಸಿಕೊಂಡಿರುವ ಫ್ರಾಂಚೈಸಿ ತಂಡಗಳಿಗೆ ಬಿಸಿಸಿಐ ನೀಡಿರುವ ವಾರ್ನಿಂಗ್ ಹೊಸದೊಂದು ಸಂಕಷ್ಟ ತಂದಿಟ್ಟಿದೆ.
ಐಪಿಎಲ್ ನಲ್ಲಿ ಪಾಲ್ಗೊಳ್ಳುವ ತಂಡಗಳು ಇದೇ ನವೆಂಬರ್ 15ರೊಳಗೆ ತಂಡದ ಒಪ್ಪಂದಿಂದ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿ ನೀಡುವಂತೆ ಕೇಳಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಟೂರ್ನಿ ವೇಳೆ ಆಟಗಾರರನ್ನ ತಂಡಗಳು ರಿಲೀಸ್ ಮಾಡುತ್ತಿತ್ತು. ಇದೀಗ ಆಟಗಾರರ ದೃಷ್ಟಿಯಿಂದ ಬಿಸಿಸಿಐ ಅಂತಿಮ ಗಡವು ನೀಡಿದೆ.
ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಲವು ಆಟಾಗರರನ್ನು ಒಪ್ಪಂದಿಂದ ಬಿಡುಗಡೆ ಮಾಡಲು ಫ್ರಾಂಚೈಸಿಗಳು ಮುಂದಾಗಿದ್ದು, ಈ ಪೈಕಿ ಡೆಲ್ಲಿ ಡೇರ್‌ಡೆವಿಲ್ಸ್  ತಂಡ ಗೌತಮ್ ಗಂಭೀರ್ ಕೈಬಿಡುವ ಸಾಧ್ಯತೆ ಇದೆ. ಕಳೆದ ಆವೃತ್ತಿಯಲ್ಲಿ ಗಂಭೀರ್ ಟೂರ್ನಿ ನಡುವೆ ನಾಯಕತ್ವದಿಂದ ಕೆಳಗಿಳಿದಿದ್ದರು. ಅಂತೆಯೇ ಅವರ ಪ್ರದರ್ಶನ ಕೂಡ ಹೇಳಿಕೊಳ್ಳುವ ರೀತಿಯಲ್ಲಿರಲಿಲ್ಲ. ಹೀಗಾಗಿ ಈ ಬಾರಿ ಗಂಭೀರ್ ರನ್ನು ಡೆಲ್ಲಿ ತಂಡ ಬಿಟ್ಟುಕೊಡುವ ಸಾಧ್ಯತೆ ಇದೆ.
ಅಂತೆಯೇ ಕಳೆದ ಬಾರಿ 11 ಕೋಟಿ ರೂಪಾಯಿಗೆ ಸೈನ್ ರೈಸರ್ಸ್ ಹೈದರಾಬಾದ್ ಪಾಲಾಗಿದ್ದ ಕನ್ನಡಿಗ ಮನೀಶ್ ಪಾಂಡೆ ಬಹುತೇಕ ಎಲ್ಲಾ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ ಪಾಂಡೆ ಗಳಿಸಿದ್ದು ಕೇವಲ 284 ರನ್. ಹೀಗಾಗಿ ಪಾಂಡೆ ಕೂಡ ತಂಡದಿಂದ ರಿಲೀಸ್ ಆಗೋ ಸಾಧ್ಯತೆ ಇದೆ. ಇದಲ್ಲದೆ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧದ  ಶಿಕ್ಷೆ ಅನುಭವಿಸುತ್ತಿರುವ ಆಸಿಸ್ ಕ್ರಿಕೆಟಿಗ, ಸನ್‌ ರೈಸರ್ಸ್ ಮಾಜಿ ನಾಯಕ ಡೇವಿಡ್ ವಾರ್ನರ್ ಆಯ್ಕೆ ಕೂಡ ಡೋಲಾಯಮಾನವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!