ಅಜರ್ ಅಲಿ 
ಕ್ರಿಕೆಟ್

ವಿಚಿತ್ರ ರನ್ಔಟ್: ನಗೆಪಾಟಲಿಗೀಡಾದ ಪಾಕ್ ಬ್ಯಾಟ್ಸ್ ಮನ್, ವಿಡಿಯೋ ನೋಡಿದ್ರೆ ನಗು ಬರುತ್ತೆ!

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಪರ ಉತ್ತಮವಾಗಿ ಆಡುತ್ತಿದ್ದ ಬ್ಯಾಟ್ಸ್ ಮನ್ ಅಜರ್ ಅಲಿ ಅವರು ವಿಚಿತ್ರ ರೀತಿಯಲ್ಲಿ ರನ್ ಔಟ್ ಆಗಿ ನಗೆಪಾಟಲಿಗೀಡಾಗಿದ್ದಾರೆ...

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಪರ ಉತ್ತಮವಾಗಿ ಆಡುತ್ತಿದ್ದ ಬ್ಯಾಟ್ಸ್ ಮನ್ ಅಜರ್ ಅಲಿ ಅವರು ವಿಚಿತ್ರ ರೀತಿಯಲ್ಲಿ ರನ್ ಔಟ್ ಆಗಿ ನಗೆಪಾಟಲಿಗೀಡಾಗಿದ್ದಾರೆ. 
ಅಜರ್ ಅಲಿ ಆಸ್ಟ್ರೇಲಿಯಾದ ಬೌಲರ್ ಪೀಟರ್ ಸಿಡ್ಲ್ ಅವರ 3ನೇ ಎಸೆತವನ್ನು ಥರ್ಡ್ ಮ್ಯಾನ್ ಕಡೆ ಬಾರಿಸಿದರು. ಈ ವೇಳೆ ಫೀಲ್ಡರ್ ಯಾರು ಇಲ್ಲವೆಂದು ತಿಳಿದ ಅಜರ್ ಚೆಂಡು ಬೌಂಡರಿಗೆ ತಲುಪಿದೆ ಎಂದು ಅರಿತು ರನ್ ಕದಿಯದೆ ತಮ್ಮ ಸಹ ಬ್ಯಾಟ್ಸ್ ಮನ್ ಅಸದ್ ಶಾಫಿಕ್ ಬಳಿ ತೆರಳುತ್ತಾರೆ. 
ಈ ವೇಳೆ ಚೆಂಡು ಬೌಂಡರಿ ಗೆರೆಯನ್ನು ಮುಟ್ಟಲಿಲ್ಲ ಎಂಬುದನ್ನು ಗಮನಿಸಿದ ಫೀಲ್ಡರ್ ಮಿಚೆಲ್ ಸ್ಟಾರ್ಕ್ ಕೀಪರ್ ಟೀಮ್ ಪೈನೆಗೆ ಚೆಂಡನ್ನು ಎಸೆದು ರನೌಟ್ ಮಾಡುತ್ತಾರೆ. ಅಜರ್ ಪಿಚ್ ಮಧ್ಯದಲ್ಲಿ ಶಾಫಿಕ್ ಜತೆ ಸಂಭಾಷಣೆಯಲ್ಲಿ ತೊಡಿಗಿರುವಾಗ ಈ ಘಟನೆ ನಡೆದಿದೆ. ಒಟ್ಟಿನಲ್ಲಿ 64 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಅಜರ್ ಚೆಂಡನ್ನು ಸರಿಯಾಗಿ ಗಮನಿಸಿದೆ ಔಟ್ ಆಗಿ ನಿರ್ಗಮಿಸಿದ್ದಾರೆ. 
ಅಜರ್ ರನೌಟ್ ಆದ ಸನ್ನಿವೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವೀಟರ್ ನಲ್ಲಿ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT