ಬೆಂಗಳೂರು: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತ ಸ್ಟಂಪ್ ಗಳನ್ನು ಮಾಡಿದ್ದು ಇದೀಗ ಧೋನಿ ರೀತಿಯಲ್ಲೇ ಇಶನ್ ಕಿಶನ್ ಅದ್ಭುತವಾಗಿ ಸ್ಟಂಪ್ ಔಟ್ ಮಾಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಎರಡನೇ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ದೆಹಲಿ 2 ವಿಕೆಟ್ ಗಳಿಂದ ಜಯ ಗಳಿಸಿದೆ.
ಈ ಮಧ್ಯೆ ಜಾರ್ಖಂಡ್ ನ ವಿಕೆಟ್ ಕೀಪರ್ ಇಶನ್ ಕಿಶನ್ ಹಿಮ್ಮತ್ ಸಿಂಗ್ ರನ್ನು ಅದ್ಭುತವಾಗಿ ಸ್ಟಂಪ್ ಔಟ್ ಮಾಡಿದ್ದಾರೆ. ಆನಂದ್ ಸಿಂಗ್ ಬೌಲಿಂಗ್ ನಲ್ಲಿ ಹಿಮ್ಮತ್ ಆನ್ ಸೈಡ್ ನಲ್ಲಿ ಬ್ಯಾಟ್ ಬೀಸಿದರು. ಆದರೆ ಚೆಂಡು ಬ್ಯಾಟ್ ಗೆ ತಗುಲದೆ ಕೀಪರ್ ಕೈ ಸೇರಿತ್ತು.
ಕ್ರೀಸ್ ನಲ್ಲೇ ಇದ್ದ ಹಿಮ್ಮತ್ ತಮ್ಮ ಕಾಲನ್ನು ಸ್ವಲ್ಪ ಮೇಲಕ್ಕೆ ಎತ್ತಿದ್ದಾರೆ. ಇದನ್ನೇ ಕಾಯುತ್ತಿದ್ದ ಇಶನ್ ಕೂಡಲೇ ಸ್ಟಂಪ್ ಮಾಡಿ ಅಂಪೈರ್ ಗೆ ಮನವಿ ಮಾಡಿದ್ದಾರೆ. ನಂತರ ದೃಶ್ಯಗಳನ್ನು ಮೂರನೇ ಅಂಪೈರ್ ಪರಿಶೀಲಿಸಿದರು. ಚೆಂಡು ಬೆಲ್ಸ್ ಗೆ ತಗುಲಿದಾಗ ಹಿಮ್ಮತ್ ಅವರ ಕಾಲು ನೆಲದಿಂದ ಮೇಲೆ ಇದ್ದಿದ್ದರಿಂದ ಔಟ್ ಎಂದು ತೀರ್ಪು ನೀಡಿದರು. ಔಟ್ ತೀರ್ಪು ಬಂದ ಕೂಡಲೇ ಇಶನ್ ಖುಷಿಯಿಂದ ಕುಣಿದಿದ್ದರು.
ಆದರೆ ಪಂದ್ಯ ಗೆಲ್ಲುವಲ್ಲಿ ಜಾರ್ಖಂಡ್ ಎಡವಿದ್ದು 2 ವಿಕೆಟ್ ಗಳಿಂದ ರೋಚಕ ಗೆಲುವು ದಾಖಲಿಸಿದ ದೆಹಲಿ ತಂಡ ಫೈನಲ್ ಪ್ರವೇಶಿಸಿದೆ.