ಕ್ರಿಕೆಟ್

ವಿರೇಂದ್ರ ಸೆಹ್ವಾಗ್ ಹುಟ್ಟುಹಬ್ಬ: ಆಧುನಿಕ ಕಾಲದ ವಿವಿಯನ್ ರಿಚರ್ಡ್ಸ್ ಎಂದು ಕರೆದ ಹರ್ಭಜನ್ ಸಿಂಗ್

Nagaraja AB

ನವದೆಹಲಿ:  ಮುಲ್ತಾನ್ ಸುಲ್ತಾನ್, ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಗೆ 40 ನೇ ಹುಟ್ಟುಹಬ್ಬದ ಸಂಭ್ರಮ. ಇದರ ಪ್ರಯುಕ್ತ ಮಾಜಿ ಹಾಗೂ ಹಾಲಿ ಆಟಗಾರರಿಂದ  ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಆರಂಭಿಕ ಕ್ರಮಾಂಕದಲ್ಲಿ ಸೆಹ್ವಾಗ್ ಹೊಡಿ- ಬಡಿ ಹೊಡೆತಗಳಿಂದ ಹೆಸರಾಗಿದ್ದ ಸೆಹ್ವಾಗ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ಹರ್ಭಜನ್ ಸಿಂಗ್ , ಸೆಹ್ವಾಗ್   ಆಧುನಿಕ ಕಾಲದ ವಿವಿಯನ್ ರಿಚರ್ಡ್ಸ್ ಎಂದು ತಮ್ಮ ಟ್ವೀಟರ್ ನಲ್ಲಿ ಪೋಸ್ಟ್  ಮಾಡಿದ್ದಾರೆ.
ಸೌರವ್ ಗಂಗೂಲಿ, ಸುರೇಶ್ ರೈನಾ, ವಿವಿಎಸ್ ಲಕ್ಷ್ಮಣ್, ಇಶಾಂತ್ ಮತ್ತಿತರರು ಸೆಹ್ವಾಗ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
SCROLL FOR NEXT