ಪುಣೆ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತವಾಗಿ ಕ್ಯಾಚ್ ಹಿಡಿದ ಬೆನ್ನಲ್ಲೇ ಇದೀಗ ರೋಹಿತ್ ಶರ್ಮಾ ಸಹ ಸೂಪರ್ ಕ್ಯಾಚ್ ಹಿಡಿದಿದ್ದಾರೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್ ಮನ್ ರೊಮನ್ ಪೊವೆಲ್ ಕುಲದೀಪ್ ಯಾದವ್ ಎಸೆತವನ್ನು ಶಾಟ್ ಹೊಡೆಯಲು ಮುಂದಾದರೂ ಆದರೆ ಚೆಂಡು ಬ್ಯಾಟ್ ಗೆ ತಲುಗಿ ಫಸ್ಟ್ ಸ್ಲಿಪ್ ಗೆ ಹೋಯಿತು.
ಈ ವೇಳೆ ಫಸ್ಟ್ ಸ್ಲಿಪ್ ನಲ್ಲಿದ್ದ ರೋಹಿತ್ ಶರ್ಮಾ ಕಣ್ಣು ಮಿಟಿಸುವುದರಲ್ಲಿ ಡೈವ್ ಮಾಡಿ ಸೂಪರ್ ಆಗಿ ಕ್ಯಾಚ್ ಹಿಡಿದರು.