ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

1 ರನ್‌ನಿಂದ ಕೈತಪ್ಪಿತ್ತು ವಿಶ್ವ ದಾಖಲೆ, ವಿಂಡೀಸ್ ವಿರುದ್ಧದ 5ನೇ ಪಂದ್ಯದಲ್ಲಿ ಸಾಧಿಸುತ್ತಾರಾ ಎಂಎಸ್ ಧೋನಿ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 10 ಸಾವಿರ ರನ್ ಕ್ಲಬ್ ಸೇರಿದ ಬೆನ್ನಲ್ಲೇ ಇದೀಗ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ದಾಖಲೆ ಮಾಡಲು 1 ರನ್ ಗಳ ಅವಶ್ಯಕತೆಯಿದೆ...

ಎಂಎಸ್ ಧೋನಿ
Vishwanath S
Updated On : 30 Oct 2018, 4:30 am
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 10 ಸಾವಿರ ರನ್ ಕ್ಲಬ್ ಸೇರಿದ ಬೆನ್ನಲ್ಲೇ ಇದೀಗ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ದಾಖಲೆ ಮಾಡಲು 1 ರನ್ ಗಳ ಅವಶ್ಯಕತೆಯಿದೆ. 
ಮುಂಬೈನಲ್ಲಿ ವಿಂಡೀಸ್ ವಿರುದ್ಧ ನಡೆದ 4ನೇ ಪಂದ್ಯದಲ್ಲಿ ಧೋನಿ 24 ರನ್ ಗಳಿಸಿದ್ದರೆ ಈ ಸಾಧನೆ ನಿರ್ಮಾಣವಾಗುತ್ತಿತ್ತು. ಆದರೆ 23 ರನ್ ಗಳಿಸಿ ಕ್ಯಾಚ್ ನೀಡಿ ಔಟಾಗಿದ್ದರು. ಇನ್ನು ವಿಂಡೀಸ್ ವಿರುದ್ಧದ ಐದನೇ ಪಂದ್ಯದಲ್ಲಿ ಎಂಎಸ್ ಧೋನಿ ಈ ಸಾಧನೆ ಮಾಡಲಿದ್ದಾರಾ ಕಾದು ನೋಡಬೇಕು. 
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಧೋನಿ ಒಟ್ಟು 10,173 ರನ್ ಗಳಿಸಿದ್ದಾರೆ. ಹೀಗಾಗಿ ಈಗಾಗಲೇ 10 ಸಾವಿರ ರನ್ ಗಳ ಗಡಿ ದಾಟಿದ್ದಾರೆ ಅಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಈ ಪೈಕಿ 174 ರನ್ ಗಳು ಏಷ್ಯಾ ತಂಡವನ್ನು ಪ್ರತಿನಿಧಿಸಿ ಗಳಿಸಿದ್ದಾರೆ. 2007ರಲ್ಲಿ ಆಫ್ರಿಕಾ ಇಲೆವನ್ ಮತ್ತು ಏಷ್ಯಾ ಇಲೆವನ್ ನಡುವೆ ನಡೆದ 3 ಪಂದ್ಯಗಳ ಸರಣಿಯಲ್ಲಿ ಧೋನಿ ಒಟ್ಟು 174 ರನ್ ಗಳಿಸಿದ್ದರು. ಹೀಗಾಗಿ ಈ ರನ್ ಟೀಂ ಇಂಡಿಯಾ ಪರ ಸೇರದ ಕಾರಣ ಈಗ 9,999 ರನ್ ಗಳ ಹೊಸ್ತಿಲಿನಲ್ಲಿ ಧೋನಿ ಇದ್ದಾರೆ. 

Advertisement

Advertisement

ಟೀಂ ಇಂಡಿಯಾದ ಪರ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ 10 ಸಾವಿರ ರನ್ ಗಳ ಗಡಿ ದಾಟ್ಟಿದ್ದಾರೆ. ಎಂಎಸ್ ಧೋನಿ 10 ಸಾವಿರ ರನ್ ಗಳಿಸಿದರೆ ವಿಶ್ವ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ 13ನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement