ಮುಂಬೈ: ವೆಸ್ಟ್ ಇಂಡೀಯ್ ತಂಡ ಕೇವಲ ಟೀಂ ಇಂಡಿಯಾ ಜತೆ ಸ್ಪರ್ಧಿಸಲು ಬಂದಿಲ್ಲ. ಅದರ ಜತೆಗೆ ಎದುರಾಳಿ ತಂಡದಿಂದ ಕಲಿಯಲು ನಾನು ಇಲ್ಲಿ ಬಂದಿದ್ದೇವೆ ಎಂದು ವಿಂಡೀಸ್ ಫೀಲ್ಡಿಂಗ್ ಕೋಚ್ ನಿಕ್ ಪೊಥಾಸ್ ಹೇಳಿದ್ದಾರೆ.
ಟೀಂ ಇಂಡಿಯಾ ಒಂದು ಅದ್ಭುತ ತಂಡ. ಅಂತಹ ತಂಡದಿಂದ ಕಲಿಯುವುದು ಸಾಕಷ್ಟಿರುತ್ತದೆ. ಗುಣಮಟ್ಟದ ತಂಡಗಳ ವಿರುದ್ಧ ಆಡುವಾಗ ಕಲಿಯಲು ಸಾಕಷ್ಟು ಅವಕಾಶಗಳಿರುತ್ತವೆ ಎಂದು ಟೀಂ ಇಂಡಿಯಾ ವಿರುದ್ಧ ಕೊನೆಯ ಹಾಗೂ ಅಂತಿಮ ಏಕದಿನ ಪಂದ್ಯಕ್ಕೂ ಮುನ್ನ ಹೇಳಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ಕಟ್ಟಿಹಾಕಲು ಯಾವುದಾದರೂ ರಣತಂತ್ರವನ್ನು ರೂಪಿಸಿದ್ದೀರಾ ಎಂದು ಪ್ರಶ್ನಿಸಿದ್ದಾಗ ಅದಕ್ಕೆ ಪೊಥಾಸ್ ಅವರು ಕೊಹ್ಲಿ ಮತ್ತು ರೋಹಿತ್ ಇನ್-ಫಾರ್ಮ್ ಜೋಡಿಯಲ್ಲ. ನಾವು ಯಾವುದೇ ವಿಶೇಷ ರಣತಂತ್ರಗಳನ್ನು ಹೆಣೆದಿಲ್ಲ. ಅವರಿಬ್ಬರು ವಿಶ್ವದರ್ಜೆಯ ಕ್ರಿಕೆಟಿಗರು. ಇನ್ನು ಶಿಖರ್ ಧವನ್ ರನ್ನು ಬಿಡಲು ಸಾಧ್ಯವಿಲ್ಲ. ಅಲ್ಲದೆ ಅಂಬಟ್ಟಿ ರಾಯುಡು ಯಾವಾಗಬೇಕಾದರೂ ಸ್ಫೋಟಗೊಳ್ಳುತ್ತಾರೆ. ಹೀಗೆ ಟೀಂ ಇಂಡಿಯಾದಲ್ಲಿ ಸಾಕಷ್ಟು ಅದ್ಭುತ ಆಟಗಾರರಿದ್ದಾರೆ.
ಟೀಂ ಇಂಡಿಯಾ ವಿರುದ್ಧದ ಐದು ಏಕದಿನ ಸರಣಿಯಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡ 1-2 ಅಂತರದಿಂದ ಹಿನ್ನಡೆಯಲ್ಲಿದೆ. ಇನ್ನು ನಾಳೆ ನಡೆಯಲಿರುವ ಅಂತಿಮ ಹಾಗೂ ಕೊನೆಯ ಏಕದಿನ ಪಂದ್ಯವನ್ನು ವಿಂಡೀಸ್ ಗೆದ್ದರೆ ಸರಣಿ ಟೈ ಆಗಲಿದೆ. ಇನ್ನು ಭಾರತ ಗೆದ್ದರೆ ಸರಣಿ ಭಾರತ ಕೈವಶವಾಗಲಿದೆ.