ಸಂಗ್ರಹ ಚಿತ್ರ 
ಕ್ರಿಕೆಟ್

4ನೇ ಟೆಸ್ಟ್: ಇಂಗ್ಲೆಂಡ್ 271ಕ್ಕೆ ಆಲೌಟ್, ಭಾರತದ ಗೆಲುವಿಗೆ 245 ರನ್ ಟಾರ್ಗೆಟ್

ಟೀಂ ಇಂಡಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೆ ದಿನ ಇಂಗ್ಲೆಂಡ್ 96.1 ಓವರ್‌ಗಳಲ್ಲಿ....

ಸೌತಾಂಪ್ಟನ್: ಟೀಂ ಇಂಡಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೆ ದಿನ ಇಂಗ್ಲೆಂಡ್ 96.1 ಓವರ್‌ಗಳಲ್ಲಿ 271 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದ್ದು, ಭಾರತದ ಗೆಲುವಿಗೆ 245 ರನ್ ಗಳ ಟಾರ್ಗೆಟ್ ನೀಡಿದೆ.
ನಿನ್ನೆ ಟೀಂ ಇಂಡಿಯಾ ಬೌಲರ್ ಗಳು ಮಿಂಚಿನ ದಾಳಿ ನಡೆಸಿದ ಪರಿಣಾಮ 3ನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿದ್ದ ಇಂಗ್ಲೆಂಡ್ ಇಂದು 271ಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ. 
ಭಾರತದ ಪರ ಮೊಹಮ್ಮದ್ ಶಮಿ ನಾಲ್ಕು, ಇಶಾಂತ್ ಶರ್ಮಾ ಎರಡು ಮತ್ತು ಜಸ್ಪ್ರೀತ್ ಬುಮ್ರಾ ಹಾಗೂ ಆರ್ ಅಶ್ವಿನ್ ತಲಾ ಒಂದು ವಿಕೆಟುಗಳನ್ನು ಪಡೆದರು.
ಗೆಲುವಿಗಾಗಿ ಆಂಗ್ಲರು ನೀಡಿದ 245 ರನ್ ಗಳ ಟಾರ್ಗೆಟ್ ಬೆನ್ನತ್ತಿದ್ದ ಭಾರತ ಆರಂಭಿಕ ಆಘಾತ ಅನುಭವಿಸಿದ್ದು, ನಾಲ್ಕನೇ ದಿನದ ಊಟದ ವಿರಾಮದ ಹೊತ್ತಿಗೆ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹತ್ಯೆಯಾಗಿ 4 ತಿಂಗಳ ಬಳಿಕ ಖಮೇನಿ ಅಂತ್ಯಕ್ರಿಯೆಗೆ ಇರಾನ್ ಸಿದ್ಧತೆ: ಶವಪೆಟ್ಟಿಗೆ ಪ್ರದರ್ಶನ; ಇಷ್ಟು ದಿನ ಎಲ್ಲಿತ್ತು ಶರೀರ?

ಶ್ರೀರಂಗಪಟ್ಟಣದಲ್ಲಿ 200 ಎಕರೆ ಭೂಕಬಳಿಕೆ ಬಯಲಿಗೆಳೆದ ಲೋಕಾಯುಕ್ತ; 9 ಜನರ ಬಂಧನ, ADLR ಅಧಿಕಾರಿ ಮೊಹಮ್ಮದ್ ಪರಾರಿ!

ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಟ್ರಕ್ ಡಿಕ್ಕಿ, 9 ಬೌದ್ಧ ಭಿಕ್ಷುಗಳು ಸಾವು! ಚೆಲ್ಲಾಪಿಲ್ಲಿಯಾಗಿ ರಸ್ತೆ ಮೇಲೆ ಬಿದ್ದ ಮೃತದೇಹಗಳು, Video

ವೈಭವ್ ಸೂರ್ಯವಂಶಿಗೆ ಜಾಸ್ತಿ ಹೈಪ್ ಕೊಡಬೇಡಿ: ಕಪಿಲ್ ದೇವ್ ಹೀಗೆ ಹೇಳಿದ್ಯಾಕೆ ಗೊತ್ತಾ?

ಬೆಂಗಳೂರು: ಸರ್ಜಾಪುರ ಸಮೀಪ, ನಿರ್ಜನ ರಸ್ತೆಯಲ್ಲಿ ಬೈಕ್ ಜೊತೆ ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ಕಾರಣ ನಿಗೂಢ!