ಕ್ರಿಕೆಟ್

ಏಷ್ಯಾ ಕಪ್: ಒಬ್ಬೊಬ್ಬರಿಗೆ ಒಂದೊಂದು ಕಾನೂನು; ಆಯ್ಕೆಗಾರರ ವಿರುದ್ಧ ಹರ್ಭಜನ್ ಸಿಂಗ್ ವಾಗ್ದಾಳಿ

Nagaraja AB

ಪಂಜಾಬ್: ಮುಂಬರುವ ಏಷ್ಯಾ ಕಪ್ ಟೂರ್ನಿಗೆ ಮಾಯಾಂಕ್ ಅಗರ್ ವಾಲ್ ಅವರನ್ನು ಆಯ್ಕೆ ಮಾಡದಿರುವ ಆಯ್ಕೆದಾರರ ವಿರುದ್ಧ ಟೀಂ ಇಂಡಿಯಾ ಅಪ್ ಸ್ಪಿನ್ನರ್ ಹರ್ಭಜನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ

ಇಂಗ್ಲೆಂಡ್ ಪ್ರವಾಸದ ನಂತರ ಏಷ್ಯಾ ಕಪ್ ಆರಂಭವಾಗಲಿದ್ದು, ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ತಂಂಡವನ್ನು ರೋಹಿತ್ ಶರ್ಮಾ ಮುನ್ನಡೆಸುವಂತೆ ಬಿಸಿಸಿಐ ನಿರ್ಧರಿಸಿದೆ.

ರಾಜಸ್ತಾನ ಖಲೀಲ್ ಅಹ್ಮದ್ ಸಹಿತ 16 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನು ರೊಹಿತ್ ಶರ್ಮಾ ಮುನ್ನಡೆಸಲಿದ್ದಾರೆ.

ದೇಶಿಯ ಕ್ರಿಕೆಟ್  ಹಾಗೂ ಎ ತಂಡದ ಪಂದ್ಯದಲ್ಲಿ ಹೆಚ್ಚಿನ ರನ್ ಕಲೆಹಾಕಿದ್ದರೂ ಮಾಯಾಂಕ್ ಅಗರ್ ವಾಲ್  ಏಷ್ಯಾ ಕಪ್ ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಮಾಯಾಂಕ್ ಅಗರ್ ವಾಲ್ ಅವರನ್ನು ಹೊರಗಿಟ್ಟಿರುವುದಕ್ಕೆ ಹರ್ಭಜನ್ ಸಿಂಗ್ ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ. ಹೆಚ್ಚಿನ ರನ್ ಗಳಿಸಿದ್ದರೂ ಮಾಯಾಂಕ್ ಅಗರ್ ವಾಲ್ ಏಲ್ಲಿ? ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಾನೂನು ಎಂಬ ಕಾನೂನು ಎಂಬುದನ್ನು ನಾನು  ಊಹಿಸಿಕೊಂಡಿದ್ದೇನೆ ಎಂದು ಎಂದು ಬರೆದುಕೊಂಡಿದ್ದಾರೆ.

ಆದಾಗ್ಯೂ, ಏಷ್ಯಾ ಕಪ್ ನಂತರ ಮಾಯಾಂಕ್ ಅಗರ್ ವಾಲ್ ಅವರಿಗೆ ಶೀಘ್ರದಲ್ಲಿಯೇ ಅವಕಾಶ ನೀಡುವುದಾಗಿ ಆಯ್ಕೆಗಾರರ ಮುಖ್ಯಸ್ಥ  ಎಂಎಸ್ ಕೆ ಪ್ರಸಾದ್ ಹೇಳಿದ್ದಾರೆ.

20 ವರ್ಷದ ಖಲೀಲ್ ರಾಜಸ್ತಾನದವರಾಗಿದ್ದು, 28 ವಿಕೆಟ್ ಗಳ ಮೂಲಕ 4. 74 ಸರಾಸರಿ ಹೊಂದಿದ್ದಾರೆ. 2016ರಲ್ಲಿ  ನಡೆದ 19 ವರ್ಷದೊಳಗಿನ ವಿಶ್ವಕಪ್ ಟೂರ್ನಿಯಿಂದಲೂ  ಅವರಿಗೆ ರಾಹುಲ್ ದ್ರಾವಿಡ್ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಇತ್ತೀಚಿಗೆ ಇಂಗ್ಲೆಂಡ್ ಪ್ರವಾಸದ ವೇಳೆಯಲ್ಲಿ ಖಲೀಲ್ ಇಂಡಿಯಾ ಎ ತಂಡದಲ್ಲಿದ್ದರು.
SCROLL FOR NEXT