ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಏಷ್ಯಾಕಪ್ ಫೈನಲ್: ಲಿಟನ್ ಶತಕ, ಬಾಂಗ್ಲಾ 222ಕ್ಕೆ ಆಲೌಟ್

ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಫೈನಲ್ ಹಣಾಹಣಿಯಲ್ಲಿ ಬಾಂಗ್ಲಾದೇಶ 222 ರನ್ ಗಳಿಗೆ ಆಲೌಟ್ ಆಗಿದೆ

ಏಷ್ಯಾಕಪ್ ಫೈನಲ್: ಲಿಟನ್ ಶತಕ, ಬಾಂಗ್ಲಾ 222ಕ್ಕೆ ಆಲೌಟ್
Raghavendra Adiga
Updated On : 28 Sept 2018, 8:52 am
ದುಬೈ: ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಫೈನಲ್ ಹಣಾಹಣಿಯಲ್ಲಿ ಬಾಂಗ್ಲಾದೇಶ 222 ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾ ಬಲಗೈ ಬ್ಯಾಟ್ಸ್ ಮನ್, ಪ್ರಾರಂಭಿಕ ಆಟಗಾರ  ಲಿಟನ್ ದಾಸ್ ಶತಕದ ನೆರವಿನಿಂದ  48.3 ಓವರ್‌ ಗಳಲ್ಲಿ 222  ರನ್ ಕಲೆ ಹಾಕಿದೆ.
ಬಾಂಗ್ಲಾ ಪರವಾಗಿ ಲಿಟನ್ ದಾಸ್ 12 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 121 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದ್ದರು.

Advertisement

Advertisement


ಇನ್ನು ಮೆಹಿದಿ ಹಸನ್ (32), ಸೌಮ್ಯ ಸರ್ಕಾರ್ (33) ರನ್ ಕಲೆಹಾಕಿದ್ದರು. ಇದರ ಹೊರತಾಗಿ ಮತ್ತಾರೂ ಎರಡಂಕಿ ಸಹ ತಲುಪುವುದಕ್ಕೆ ವಿಫಲರಾದರೆನ್ನುವುದು ಗಮನಾರ್ಹ.

ಭಾರತದ ಪರ ಕುಲದೀಪ್ ಯಾದವ್ 3,  ಕೇದಾರ್ ಜಾಧವ್ 2 ಹಾಗೂ ಬುಮ್ರಾ ಹಾಗೂ ಚಹಾಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ.

ಇದೀಗ ಭಾರತಕ್ಕೆ ದಾಖಲೆಯ ಏಳನೇ ಏಷ್ಯಾಕಪ್ ಪ್ರಶಸ್ತಿ ಜಯಿಸಲು 223 ರನ್ ಗಳಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments