ವಿರಾಟ್ ಕೊಹ್ಲಿ 
ಕ್ರಿಕೆಟ್

ಆರ್‌ಸಿಬಿ ಸತತ ಸೋಲು: ವಿಶ್ವಕಪ್​ನಲ್ಲೂ ಕೊಹ್ಲಿ ನೇತೃತ್ವದ ತಂಡ ಮಕಾಡೆ ಮಲಗಲಿದೆ; ಕೆಆರ್ ಖಾನ್

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಆರ್‌ಸಿಬಿ ತಂಡ ಸತತ ಸೋಲು ಕಂಡಿದೆ. ಇದೀಗ ವಿರಾಟ್ ಕೊಹ್ಲಿಯ ನಾಯಕತ್ವದ ಕುರಿತು ಪ್ರಶ್ನೆ ಮೂಡಿಸಿದ್ದು ವಿಶ್ವಕಪ್​ನಲ್ಲೂ ತಂಡ ಮಕಾಡೆ ಮಲಗಲಿದೆ...

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಆರ್‌ಸಿಬಿ ತಂಡ ಸತತ ಸೋಲು ಕಂಡಿದೆ. ಇದೀಗ ವಿರಾಟ್ ಕೊಹ್ಲಿಯ ನಾಯಕತ್ವದ ಕುರಿತು ಪ್ರಶ್ನೆ ಮೂಡಿಸಿದ್ದು ವಿಶ್ವಕಪ್​ನಲ್ಲೂ ತಂಡ ಮಕಾಡೆ ಮಲಗಲಿದೆ ಎಂದು ಬಾಲಿವುಡ್ ನಟ ಕಮಾಲ್ ಆರ್ ಖಾನ್ ತೆಗೆದುಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನದಿಂದ ಕೋಪಗೊಂಡಿರುವ ಕಮಾಲ್ ಖಾನ್ ವಿರಾಟ್ ಕೊಹ್ಲಿ ಕಳಪೆ ಕಪ್ತಾನ. ಈ ಬಾರಿಯ ಐಪಿಎಲ್ ನಲ್ಲಿ ಒಂದೇ ಜಯ ದಾಖಲಿಸದ ಬೆಂಗಳೂರು ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೆಳಭಾಗದಲ್ಲಿದೆ. ಇದು ಕೊಹ್ಲಿಯ ನಾಯಕತ್ವದ ಮಟ್ಟವನ್ನು ತೋರಿಸುತ್ತದೆ ಎಂದು ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ.
ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ವಿರಾಟ್ ಕೊಹ್ಲಿ ಮುನ್ನಡೆಸಿದರೆ ತಂಡ ಸೆಮಿ ಫೈನಲ್ ಕೂಡ ಪ್ರವೇಶಿಸುವುದಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ ಎಂದು ಕಮಾಲ್ ಖಾನ್ ಭವಿಷ್ಯ ನುಡಿದಿದ್ದಾರೆ. ಕಮಾಲ್ ಖಾನ್ ಟ್ವೀಟ್ ಗೆ ಇದೀಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Guarantee scheme: ಅರ್ಹವಲ್ಲದ ಫಲಾನುಭವಿಗಳ ಕೈಬಿಟ್ಟು ಹಣ ಉಳಿತಾಯಕ್ಕೆ ಸರ್ಕಾರ ಮುಂದು; ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಕಡಿತ?

ಅಧಿಕಾರ ಹಸ್ತಾಂತರ ಗೊಂದಲ, ನಾಯಕರ ಹೇಳಿಕೆಗಳು: ವಿದೇಶಕ್ಕೆ ಹಾರಿದ ಸಿದ್ದು ಬಣದ 11 ಮಂದಿ 'ಕೈ' ಶಾಸಕರು

ಬೆಂಗಳೂರು: ಪೊಲೀಸರೆಂದು ಹೇಳಿಕೊಂಡು ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ರೂ. ನಗದು, 500 ಗ್ರಾಂ ಚಿನ್ನ ದರೋಡೆ!

ಕಾಂಗ್ರೆಸ್ ಭವನಕ್ಕಾಗಿ ಸರ್ಕಾರಿ ಭೂಮಿ ಗುಳುಂ: ಜನರಿಗಿಲ್ಲದ ಜಾಗ, ಅತ್ಯಂತ ಕಡಿಮೆ ದರದಲ್ಲಿ ಹೇಗೆ ಲಭ್ಯವಾಯಿತು? ಸರ್ಕಾರದ ವಿರುದ್ಧ BJP ಗಂಭೀರ ಆರೋಪ

SSLC, PUC Exam 2026: ಪರೀಕ್ಷೆ ಜೊತೆಗೆ ಫಲಿತಾಂಶ ದಿನಾಂಕ ಪ್ರಕಟ, 16 ಲಕ್ಷ ವಿದ್ಯಾರ್ಥಿಗಳು ನೋಂದಣಿ

SCROLL FOR NEXT