ಕ್ರಿಕೆಟ್

ಟೀಂ ಇಂಡಿಯಾ ಕೋಚ್ ಆಗುವುದರ ಬಗ್ಗೆ ದಾದಾ ಹೇಳಿದ್ದೇನು? ಇಲ್ಲಿದೆ ಮಾಹಿತಿ

Srinivas Rao BV
ಕೋಲ್ಕತ್ತ: ಟೀಂ ಇಂಡಿಯಾಗೆ ಕೋಚ್ ನೇಮಕದ ಬಗ್ಗೆ ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಸಹ ಮಾತನಾಡಿದ್ದಾರೆ. 
ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಗುವ ಇಂಗಿತ ವ್ಯಕ್ತಪಡಿಸಿರುವ ದಾದಾ, ಇಂದಲ್ಲಾ ಮುಂದೊಂದು ದಿನ ಖಂಡಿತವಾಗಿಯೂ ಟೀಂ ಇಂಡಿಯಾಗೆ ಕೋಚ್ ಆಗಬಯಸುತ್ತೇನೆ
ಎಂದಿದ್ದಾರೆ. 
ತಂಡಕ್ಕೆ ತರಬೇತಿ ನೀಡಲು ಖಂಡಿತವಾಗಿಯೂ ಉತ್ಸುಕನಾಗಿದ್ದೇನೆ, ಆದರೆ ಈ ಹಂತದಲ್ಲಿ ಅಲ್ಲ. ಮತ್ತೊಂದಷ್ಟು ಸಮಯ ಕಳೆಯಲಿ, ಆ ನಂತರ ಕೋಚ್ ಹುದ್ದೆಗೆ ನಾನೇ ಅರ್ಜಿ ಹಾಕುತ್ತೇನೆ ಎಂದಿದ್ದಾರೆ ಸೌರವ್ ಗಂಗೂಲಿ. 
ಈಗ ನಾನು ಐಪಿಎಲ್, ಸಿಎಬಿ, ಟಿವಿ ವೀಕ್ಷಕ ವಿವರಣೆ ಹೀಗೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ, ಇದನ್ನು ಪೂರ್ಣಗೊಳಿಸುತ್ತೇನೆ, ಆ ನಂತರ ತಂಡದ ಕೋಚ್ ಹುದ್ದೆಗೆ ಪ್ರಯತ್ನಿಸುತ್ತೇನೆ ಎಂದು ಗಂಗೂಲಿ ತಿಳಿಸಿದ್ದಾರೆ. 
SCROLL FOR NEXT