ಹಸನ್ ಅಲಿ 
ಕ್ರಿಕೆಟ್

ವಿವಾಹಕ್ಕೆ ಟೀಂ ಇಂಡಿಯಾ ಆಟಗಾರರನ್ನು ಆಹ್ವಾನಿಸುತ್ತೇನೆ- ಪಾಕ್ ವೇಗಿ ಹಸನ್ ಅಲಿ

ಭಾರತೀಯ ಯುವತಿ ಶಾಮಿಯಾ ಅರ್ಜು ಜೊತೆಗೆ ಸೆಪ್ಟೆಂಬರ್ 20 ರಂದು ದುಬೈಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಪಾಕಿಸ್ತಾನದ ವೇಗಿ ಬೌಲರ್ ಹಸನ್ ಅಲಿ , ತಮ್ಮ ವಿವಾಹ ಮಹೋತ್ಸವಕ್ಕೆ ಭಾರತೀಯ ಆಟಗಾರರನ್ನು ಆಹ್ವಾನಿಸುವುದಾಗಿ ಹೇಳಿದ್ದಾರೆ.

ಕರಾಚಿ: ಭಾರತೀಯ ಯುವತಿ ಶಾಮಿಯಾ  ಅರ್ಜು ಜೊತೆಗೆ ಸೆಪ್ಟೆಂಬರ್ 20 ರಂದು ದುಬೈಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಪಾಕಿಸ್ತಾನದ ವೇಗಿ ಬೌಲರ್ ಹಸನ್ ಅಲಿ , ತಮ್ಮ ವಿವಾಹ ಮಹೋತ್ಸವಕ್ಕೆ ಭಾರತೀಯ ಆಟಗಾರರನ್ನು ಆಹ್ವಾನಿಸುವುದಾಗಿ ಹೇಳಿದ್ದಾರೆ.
ಟೀಂ ಇಂಡಿಯಾದ ಯಾವ ಆಟಗಾರರನ್ನು ಕರೆಯಲಾಗುತ್ತದೆ ಎಂಬ ಬಗ್ಗೆ ಹಸನ್ ಅಲಿ ಸ್ಪಷ್ಟಪಡಿಸಿಲ್ಲ. ಆದರೆ, ಅವರು ಬಂದರೆ ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ.
ತಮ್ಮ ವಿವಾಹ ಕಾರ್ಯಕ್ರಮಕ್ಕೆ ಟೀಂ ಇಂಡಿಯಾ ಆಟಗಾರರನ್ನು ಆಹ್ವಾನಿಸುತ್ತೇನೆ, ನಂತರ ಎಲ್ಲರೂ ಕ್ರಿಕೆಟ್ ಪಂದ್ಯ ಆಡುವುದಾಗಿ ಹಸನ್ ಅಲಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ದುಬೈನಲ್ಲಿ ನಡೆಯಲಿರುವ ವಿವಾಹ ಕಾರ್ಯಕ್ರಮಕ್ಕೆ ಟೀಂ ಇಂಡಿಯಾ ಆಟಗಾರರು ಬಂದರೆ ತುಂಬಾ ಖುಷಿಯಾಗುತ್ತದೆ. ಮೈದಾನದಲ್ಲಿ ಮಾತ್ರ ಎದುರಾಳಿಯಾಗಿರುತ್ತೇವೆ, ಅಂತಿಮವಾಗಿ ನಾವೆಲ್ಲರೂ ವೃತ್ತಿಪರ ಕ್ರಿಕೆಟ್ ಆಟಗಾರರಾಗಿದ್ದು, ಖುಷಿಯನ್ನು ಹಂಚಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ. 
ಶಾಮಿಯಾ ಭಾರತೀಯ ವಿಶ್ವವಿದ್ಯಾಲಯದಿಂದ ಏರೋನಾಟಿಕ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೇ ಎಮರೈಟ್ಸ್ ಏರ್ ಲೈನ್ಸ್ ನಲ್ಲಿ ವಿಮಾನದ ಇಂಜಿನಿಯರಿಂಗ್ ಆಗಿ ಕೆಲಸ ಮಾಡುತ್ತಿದ್ದಾರೆ. ದುಬೈ ಮೂಲದ ಶಾಮಿಯಾ ಕುಟುಂಬಸ್ಥರು ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT